ಅಭಿಮಾನಿಯನ್ನ ದೂರ ತಳ್ಳಿದ ಕಮಲ್ ಹಾಸನ್ | ವೈರಲ್ ವೀಡಿಯೋ | Oneindia Kannada

Oneindia Kannada 2017-11-27

Views 77

Kamal Haasan pushed away the fan come to meet , the incident happened in Bangalore,know the incident video goes viral. Actor Kamal Haasan manhandles a fan Is it True? Watch Video, A viral video claim Universal Star Kamal and actor Ramesh Aravind pushed a fan aside. But, Kamal fans association says this video is not true.

ಭೇಟಿಗೆ ಬಂದ 'ಅಭಿಮಾನಿ'ಯನ್ನ ದೂರ ತಳ್ಳಿದ ಕಮಲ್. ಖಾಸಗಿ ಕಾರ್ಯಕ್ರಮದ ನಿಮಿತ್ತ ನಟ ,ನಿರ್ದೆಶಕ ಕಮಲ್ ಹಾಸನ್ ಇತ್ತೀಚಿಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದರು. ಇದೇ ವೇಳೆಯಲ್ಲಿ ಕಮಲ್ ರನ್ನ ನೋಡಲು ಸಾಕಷ್ಟು ಅಭಿಮಾನಿಗಳು ಸೇರಿದ್ದರು. ಕಮಲ್ ಹೊರಗಡೆ ಬರುತಿದ್ದ ಹಾಗೆ ಅಭಿಮಾನಿಯೊಬ್ಬರು ಕಮಲ್ ಹಾಸನ್ ಹತ್ತಿರ ಮುನ್ನುಗ್ಗಿದ್ದಾರೆ. ಇದೇ ಸಮಯದಲ್ಲಿ ಕಮಲ್ ಹಾಸನ್ ಜೊತೆಯಲ್ಲಿ ನಟ, ನಿರ್ದೇಶಕ ರಮೇಶ್ ಅರವಿಂದ್ ಕೂಡ ಇದ್ದರು. ಮೊದಲಿಗೆ ಅಭಿಮಾನಿಯನ್ನ ರಮೇಶ್ ಅರವಿಂದ್ ದೂರಕ್ಕೆ ತಳ್ಳಿದ್ದಾರೆ. ಇಷ್ಟಾದರೂ ಬಿಡದ ಅಭಿಮಾನಿ ಕಮಲ್ ಹಾಸನ್ ಹತ್ತಿರ ಬರುತಿದ್ದಂತೆ ಕಾಲಿಗೆ ಬೀಳಲು ಮುಂದಾಗಿದ್ದಾರೆ. ಇದನ್ನ ನೋಡಿದ ಕಮಲ್, ಆ ಅಭಿಮಾನಿಯನ್ನ ತಳ್ಳಿ ವೇಗವಾಗಿ ತಮ್ಮ ಕಾರ್ ನತ್ತ ಹೋಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಎರಡು ದಿನಗಳ ಹಿಂದೆ ನಡೆದಿರುವ ಈ ಘಟನೆಗೆ ಕಮಲ್ ಅಭಿಮಾನಿಗಳು ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ.

Share This Video


Download

  
Report form
RELATED VIDEOS