ಗುಜರಾತ್ ವಿಧಾನಸಭಾ ಚುನಾವಣೆ 2017 : ಗೆಲುವು ಕಾಂಗ್ರೆಸ್ ಗಾ ಬಿಜೆಪಿಗಾ? | Oneindia Kannada

Oneindia Kannada 2017-11-29

Views 271

ಗುಜರಾತ್, ಗೆಲುವು ಯಾರಿಗೆ? ಬಿಜೆಪಿ Vs ಕಾಂಗ್ರೆಸ್: ಒಂದು ಅವಲೋಕನ. ತೊಂಬತ್ತರ ದಶಕದಲ್ಲಿ ತನ್ನ ಭದ್ರಕೋಟೆಯಾಗಿದ್ದ ಗುಜರಾತ್ ನಲ್ಲಿ ಸತತ ನಾಲ್ಕು ಚುನಾವಣೆಯಿಂದ ಸೋಲು ಅನುಭವಿಸಿರುವ ಕಾಂಗ್ರೆಸ್ಸಿಗೆ, ಈ ಬಾರಿಯ ಚುನಾವಣೆ ಗೆಲುವು ತಂದುಕೊಡಬಹುದು ಎನ್ನುವ ಆಶಾಭಾವನೆ ಇಟ್ಟುಕೊಳ್ಳುವಂತಹ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಆರು ತಿಂಗಳ ಹಿಂದೆಯಿದ್ದ ಪರಿಸ್ಥಿತಿ ಮತ್ತು ಈಗಿನ ಪರಿಸ್ಥಿತಿ, ಸಮೀಕ್ಷೆಗಳತ್ತ ಒಮ್ಮೆ ಅವಲೋಕಿಸಿದರೆ, ಬಿಜೆಪಿಯ ಜನಪ್ರಿಯತೆ ಕುಗ್ಗುತ್ತಿರುವುದನ್ನು ಅಮಿತ್ ಶಾ ಎಂಡ್ ಪಾರ್ಟಿ ಕೂಡಾ ಅರಿತಿರುವುದರಿಂದಲೇ, ಬಿಜೆಪಿ ಕೂಡಾ ಓವರ್ ಕಾನ್ಫಿಡೆನ್ಸ್ ಆಗಿಲ್ಲ. ಬಿಜೆಪಿಗಿರುವ ಪ್ರಮುಖ ಲಾಭವೆಂದರೆ, ಬೂತ್ ಮಟ್ಟದಲ್ಲಿ ಸಕ್ರಿಯರಾಗಿರುವ ಪಕ್ಷದ ಕಾರ್ಯಕರ್ತರು.ಆದರೆ, ಇತ್ತೀಚಿನ ದಿನಗಳಲ್ಲಿ ವೃತ್ತಿಪರತೆಯಿಂದ ರಾಜಕೀಯ ಮಾಡುತ್ತಿರುವಂತೆ ಕಾಣುತ್ತಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ದೇವಸ್ಥಾನಕ್ಕೂ ಹೋಗುತ್ತಿದ್ದಾರೆ.. ತಿಲಕವನ್ನೂ ಇಟ್ಟುಕೊಳ್ಳುತಿದ್ದಾರೆ..ಬಡವರ ಕೇರಿಗೆ ಹೋಗುತ್ತಿದ್ದಾರೆ, ಕ್ಯೂಟ್ ಕ್ಯೂಟ್ ಹೆಣ್ಮಕ್ಕಳ ಜೊತೆ ಸೆಲ್ಫೀನೂ ತೆಗೆದುಕೊಳ್ಳುತ್ತಿದ್ದಾರೆ. ಮತದಾರ, ಇವರಲ್ಲಿ (ರಾಹುಲ್) ರಾಜೀವ್ ಗಾಂಧಿಯನ್ನು ಕಂಡರೂ ಕಾಣಬಹುದು..

Share This Video


Download

  
Report form
RELATED VIDEOS