'ಗೋಮುಖ ವ್ಯಾಘ್ರ' ರಿಯಾಝ್ ಔಟ್ ಆದರೆ ಪಾರ್ಟಿ ಮಾಡ್ತಾರಂತೆ ಚಂದನ್ ಶೆಟ್ಟಿ! ಇಷ್ಟು ದಿನ ಯಾವುದೇ ವಿವಾದಗಳಿಗೆ ಸಿಲುಕದೆ, ಕೇವಲ ಟಾಸ್ಕ್ ಮೇಲೆ ಮಾತ್ರ ಗಮನ ಹರಿಸುತ್ತಿದ್ದ ಚಂದನ್ ಶೆಟ್ಟಿ ಇದೀಗ ರಿಯಾಝ್ ಮೇಲೆ ಕೆಂಡಕಾರಲು ಆರಂಭಿಸಿದ್ದಾರೆ. ಕೆಲವೇ ವಾರಗಳ ಹಿಂದೆ ತಾವು ಕ್ಯಾಪ್ಟನ್ ಆಗಿದ್ದಾಗ, ರಿಯಾಝ್ ರನ್ನ ಚಂದನ್ ಶೆಟ್ಟಿ ಬಚಾವ್ ಮಾಡಿದ್ದರು. ಆದ್ರೀಗ, ಅದೇ ಚಂದನ್ ಶೆಟ್ಟಿ ''ರಿಯಾಝ್ ಔಟ್ ಆಗಬೇಕು'' ಎಂದು ಹೇಳುತ್ತಿದ್ದಾರೆ. ಈ ವಾರ ರಿಯಾಝ್ ಔಟ್ ಆಗಲಿ ಎಂದು ಚಂದನ್ ಶೆಟ್ಟಿ ದೇವರಿಗೆ ಹರಕೆ ಹೊರುತ್ತಾರಂತೆ. ರಿಯಾಝ್ ಔಟ್ ಆಗ್ಬಿಟ್ಟರೆ, 'ಬಿಗ್ ಬಾಸ್' ಮನೆಯಲ್ಲಿ ಚಂದನ್ ಶೆಟ್ಟಿ ಪಾರ್ಟಿ ಮಾಡ್ತಾರಂತೆ.! ಆರು ವಾರಗಳ ಕಾಲ ಅಣ್ಣ-ತಮ್ಮಂದಿರಂತೆ ಇದ್ದ ರಿಯಾಝ್ ಹಾಗೂ ಚಂದನ್ ಶೆಟ್ಟಿ ನಡುವೆ ಇದೀಗ ದೊಡ್ಡ ಭಿನ್ನಾಭಿಪ್ರಾಯ ಮೂಡಲು ಕಾರಣ 'ಬಲೂನ್' ಟಾಸ್ಕ್. ಬಲೂನ್ ಗಳ ಜೊತೆಗೆ ರಿಯಾಝ್ ಹಾಗೂ ಚಂದನ್ ಶೆಟ್ಟಿ ನಡುವೆ ಇದ್ದ ಗೆಳೆತನ ಕೂಡ ಒಡೆದು ಹೋಗಿದೆ.