'ನಂದಿನಿ' ಧಾರಾವಾಹಿ ನೋಡಿ ಪ್ರಾಣ ಕಳೆದುಕೊಂಡ ಪುಟ್ಟ ಬಾಲಕಿ | Filmibeat Kannada

Filmibeat Kannada 2017-11-29

Views 13

ಸಾಕಷ್ಟು ಪ್ರಭಾವ ಬೀರುವಂತಹ ಮಾಧ್ಯಮಗಳ ಪೈಕಿ ದೃಶ್ಯ ಮಾಧ್ಯಮ ಪ್ರಮುಖವಾದವು. ಪ್ರೇಕ್ಷಕರ ಮೇಲೆ ದೃಶ್ಯ ಮಾಧ್ಯಮ ಅತ್ಯಂತ ಪರಿಣಾಮಕಾರಿ ಅನ್ನೋದು ಯಾವಾಗಲೂ ಕೇಳುತ್ತಲೇ ಇರುತ್ತೇವೆ. ಈಗ ಅದೇ ದೃಶ್ಯ ಮಾಧ್ಯಮದಿಂದ ಒಂದು ದುರ್ಘಟನೆ ಸಂಭವಿಸಿದೆ. ಧಾರಾವಾಹಿ ನೋಡಿ ಪುಟ್ಟ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ದಾವಣಗೆರೆಯ ಹರಿಹರದಲ್ಲಿ ನಡೆದಿದೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುವ ನಿತ್ಯಾ ರಾಮ್ ಅಭಿನಯದ 'ನಂದಿನಿ' ಧಾರಾವಾಹಿಯಲ್ಲಿನ ದೃಶ್ಯವನ್ನ ಅನುಕರಣೆ ಮಾಡಲು ಹೋಗಿ ಪುಟ್ಟ ಬಾಲಕಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.ಹರಿಹರದ ಸೇಂಟ್ ಮೇರಿಸ್ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದ ಪ್ರಾರ್ಥನಾ ಸಾವಿಗೀಡಾಗಿರುವ ಬಾಲಕಿ. ನವೆಂಬರ್ 11 ರಂದು ಬಾಲಕಿ 'ನಂದಿನಿ' ಧಾರಾವಾಹಿಯಲ್ಲಿ ನಡೆದ ದೃಶ್ಯದಂತೆಯೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ತಕ್ಷಣ ಪೋಷಕರು ಪ್ರಾರ್ಥನಾಳನ್ನ ಆಸ್ಪತ್ರೆಗೆ ದಾಖಲು ಮಾಡಿದರು. ಚಿಕಿತ್ಸೆ ಫಲಕಾರಿಯಾಗದೆ ಮಗು ಇಂದು ಸಾವಿಗೀಡಾಗಿದೆ.

udaya is ojne of the best channel,in there nandini is one of the best serial,Little girl committed suicide after imitating,watch this video

Share This Video


Download

  
Report form
RELATED VIDEOS