ಸಿಎಂ ವಿರುದ್ದ ಎಚ್ಡಿಕೆ ಸಿಡಿಸಿದ ಮತ್ತೊಂದು ಬಾಂಬ್! ಸ್ಫೋಟಿಸುತ್ತಾ, ಠುಸ್ ಆಗುತ್ತಾ? | Oneindia Kannada

Oneindia Kannada 2017-12-04

Views 731

ನನಗೆ ಎಲ್ಲಾ ಗೊತ್ತಿದೆ, ಸೂಕ್ತ ಸಮಯದಲ್ಲಿ ದಾಖಲೆ ಸಮೇತ ಎಲ್ಲವನ್ನೂ ಬಿಡುಗಡೆ ಮಾಡುತ್ತೇನೆಂದು, ಆನಂತರ ಅದರ ಬಗ್ಗೆ ಸೊಲ್ಲೆತ್ತದೇ ಇನ್ನೊಂದು ಟಾಪಿಕ್ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪ್ರಸ್ತಾವಿಸುವುದು ಹೊಸದೇನಲ್ಲ.ಕಾಂಗ್ರೆಸ್ ಸೇರುವ ಮೊದಲು ಸಿದ್ದರಾಮಯ್ಯ ಬಿಜೆಪಿ ಸೇರಲು ಬಯಸಿದ್ದರು. ಅವರಿಗೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿತ್ತು, ಬಿಜೆಪಿ ಆ ಹುದ್ದೆಯನ್ನು ಕೊಡಲು ನಿರಾಕರಿಸಿದ್ದರಿಂದ ಕಾಂಗ್ರೆಸ್ ಸೇರಿದ್ದರು. ಅವರು ಜಾತ್ಯಾತೀತ ಎನ್ನುವುದು ಬರೀ ಡೋಂಗಿ ಎಂದು ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ, ಸಿಎಂ ವಿರುದ್ದ ಗಧಾಪ್ರಹಾರ ಮಾಡಿದ್ದರು.ಶನಿವಾರ (ಡಿ 2) ಬೆಂಗಳೂರಿನ ಜೆ ಪಿ ಭವನದಲ್ಲಿ, ನಗರದ ವಿವಿಧ ವಾರ್ಡುಗಳ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಆಪರೇಷನ್ ಕಮಲಕ್ಕೆ ಬಿಜೆಪಿಗೆ ಸಾಥ್ ನೀಡಿದ್ದೇ ಸಿದ್ದರಾಮಯ್ಯನವರು ಎನ್ನುವ ಇನ್ನೊಂದು ಬಾಂಬ್ ಸಿಡಿಸಿದ್ದಾರೆ.ಪ್ರಸಕ್ತ, ರಾಜ್ಯ ಕಾಂಗ್ರೆಸ್ಸಿನ ಎಲ್ಲಾ ಹಿರಿಯ ಮುಖಂಡರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡುತ್ತಿದ್ದಾರೆ. ಇನ್ನೊಂದು ಅವಧಿಗೂ ಅವರೇ ಸಿಎಂ ಆದರೆ ಹೇಗೆ ಎನ್ನುವ ಚಿಂತೆ ಅವರಲ್ಲಿ ಕಾಡುತ್ತಿದೆ. ಆದರೆ, ಹಿರಿಯ ಕಾಂಗ್ರೆಸ್ಸಿಗರು ತಲೆಬಿಸಿ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ, ರಾಜ್ಯದ ಜನರು ಕಾಂಗ್ರೆಸ್ಸಿಗೆ ಮತ್ತೆ ಅಧಿಕಾರಕ್ಕೆ ಕೊಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Karnataka Chief Minister Siddaramaiah indirectly supported BJP during Operation Kamala politics, JDS State President H D Kumaraswamy statement in Bengaluru..watch this video

Share This Video


Download

  
Report form
RELATED VIDEOS