ಕಿರಿಕ್ ಪಾರ್ಟಿ ರಿಮೇಕ್ ಕಿರ್ರಕ್ ಪಾರ್ಟಿಗೆ ಸಾನ್ವಿ ಸಿಕ್ಕಾಯ್ತು | Filmibeat Kannada

Filmibeat Kannada 2017-12-05

Views 2.4K

ಅಂತೂ ತೆಲುಗಿನ 'ಕಿರಿಕ್ ಪಾರ್ಟಿ' ಸಿನಿಮಾಗೆ ಸಾನ್ವಿ ಸಿಕ್ಕಳು! ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ತೆಲುಗು ಭಾಷೆಗೆ ರಿಮೇಕ್ ಆಗುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಈಗ ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿದೆ. ಸಿನಿಮಾದ ಮುಖ್ಯ ಪಾತ್ರವಾದ ಸಾನ್ವಿ ಪಾತ್ರಕ್ಕೆ ಇದೀಗ ಚಿತ್ರತಂಡ ಒಬ್ಬ ಚೆಲುವೆಯನ್ನು ಆಯ್ಕೆ ಮಾಡಿಕೊಂಡಿದೆ.'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಇಬ್ಬರು ನಾಯಕಿಯರಾಗಿರುವ ಕಾರಣ ಸಾನ್ವಿ ಪಾತ್ರ ಚಿತ್ರದ ಅರ್ಧ ಭಾಗ ಮಾತ್ರ ಇತ್ತು. ಜೊತೆಗೆ ಆ ಪಾತ್ರಕ್ಕೆ ತುಂಬ ಪ್ರಾಮುಖ್ಯತೆ ಇತ್ತು. ಸಿನಿಮಾ ರಿಲೀಸ್ ಆದ ಮೇಲೆ ನಿರೀಕ್ಷೆಗೂ ಮೀರಿ ಆ ಪಾತ್ರ ಜನರಿಗೆ ಹತ್ತಿರವಾಗಿತ್ತು. ಈ ಕಾರಣದಿಂದ ತೆಲುಗಿನಲ್ಲಿ ಬರುತ್ತಿರುವ ಈ ಚಿತ್ರದಲ್ಲಿ ಯಾರು ನಟಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಈಗ ಟಾಲಿವುಡ್ 'ಕಿರಿಕ್ ಪಾರ್ಟಿ'ಗೆ ಮುದ್ದಾದ ಸಾನ್ವಿ ಸಿಕ್ಕಿದ್ದಾಳೆ.
Hindi TV actress Simran Pareenja will play lead role in 'Kirrak Party' Telugu Movie. 'Kirrak Party' is a remake of Kannada Movie Kirik Party.

Share This Video


Download

  
Report form