December 5 was the first death anniversary of former CM of Tamil Nadu J Jayalalithaa. Thousands of fans, politicians, bureaucrats paid rich tribute to the departed leader. TTV Dinakaran, nephew of Sasikala Natarajan also went to the Burial Ground ( Samadhi ) Then what happened? TTV Dinakaran video goes viral.
ಅಗ್ರಪಂಕ್ತಿಯ ನಾಯಕರಿಂದ ಹಿಡಿದುಕೊಂಡು ಕಡುಬಡವ ಶ್ರೀಸಾಮಾನ್ಯರವರೆಗೆ ಸಹಸ್ರಾರು ಜನರು, ಡಿಸೆಂಬರ್ 5ರಂದು ಜಯಲಲಿತಾ ಸಮಾಧಿಗೆ ಭಕ್ತಿಭಾವದಿಂದ ನಮಸ್ಕರಿಸಿದ್ದಾರೆ. ಭಾವುಕತೆಯನ್ನು ಹಿಡಿದಿಡಲಾರದೆ ಕೆಲವರು ಕಂಬನಿಯನ್ನೂ ಮಿಡಿದಿದ್ದಾರೆ.ಅಂಥ ಸಹಸ್ರಾರು ಜನರಲ್ಲಿ ಎಐಎಡಿಎಂಕೆಯಲ್ಲಿ ಮೂಲೆಗುಂಪಾಗಿರುವ, ಶಶಿಕಲಾ ನಟರಾಜನ್ ಅವರ ಸಹೋದರ ಸಂಬಂಧಿ ಟಿಟಿವಿ ದಿನಕರನ್ ಕೂಡ ಒಬ್ಬರು. ಅವರು ಹಾಗೆ ಬಂದು, ಪುಷ್ಪ ನಮನವನ್ನು ಸಲ್ಲಿಸಿ, ಹಾಗೆ ಹೋಗಿದ್ದರೆ ಅಂಥ ಸುದ್ದಿ ಆಗುತ್ತಲೇ ಇರಲಿಲ್ಲ.ಟಿಟಿವಿ ದಿನಕರನ್ ಅಲ್ಲಿ ಬಂದಾಗ ಜಯಲಲಿತಾ ಸಮಾಧಿ ಬಳಿ ಡಿಸೆಂಬರ್ 5ರಂದು ನಡೆದಿರುವುದು ಭಾರೀ ಚರ್ಚೆಗೆ, ಅಪಹಾಸ್ಯಕ್ಕೆ, ವಿಡಂಬನೆಗೆ ಗ್ರಾಸವಾಗಿದೆ. ಅದನ್ನು ಜನಪ್ರಿಯ ತಮಿಳು ಸಿನೆಮಾದಲ್ಲಿ ಬರುವ ಹಾಸ್ಯಮಯ ಸನ್ನಿವೇಶದೊಡನೆ ಸಮೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಸ್ಯ ಮಾಡಲಾಗುತ್ತಿದೆ. ಟಿಟಿವಿ ದಿನಕರನ್ ಅಂದ್ರೆ ಸುಮ್ನೇನಾ? ಜತೆಗೊಂದಿಷ್ಟು ಭಾರೀ ಸಂಖ್ಯೆಯನ್ನು ಅಭಿಮಾನಿಗಳನ್ನೂ ದಂಡುಕಟ್ಟಿಕೊಂಡು ಬಂದಿದ್ದರು. ಕೆಲವರು ಬಿಕ್ಕಿಬಿಕ್ಕಿ ಅಳುತ್ತಿದ್ದರೆ, ಹಲವರಿಗೆ ತಾವೇ ಮೊದಲು ಸಮನ ಸಲ್ಲಿಸಬೇಕೆಂಬ ಹಪಾಹಪಿ. ಗೌಜುಗದ್ದಲ, ನೂಕುನುಗ್ಗಲು, ತಳ್ಳಾಟದಲ್ಲಿ ಆಗಿದ್ದೇನೆಂದರೆ...