'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಮೇಲೆ ಗಾಯಕಿ ಹಾಗೂ ನಟಿ ಶ್ರುತಿ ಪ್ರಕಾಶ್ ಮೇಲೆ ಚಂದನ್ ಶೆಟ್ಟಿಗೆ ಕ್ರಷ್ ಆಗಿದೆ. ಇದನ್ನ ಚಂದನ್ ಶೆಟ್ಟಿ ಕೂಡ ಬಾಯ್ಬಿಟ್ಟು ಹೇಳಿಕೊಂಡಿದ್ದಾರೆ. ಆದ್ರೆ, ಶ್ರುತಿ ಪ್ರಕಾಶ್ ಗೆ ಚಂದನ್ ಶೆಟ್ಟಿಗಿಂತ ಜೆಕೆ ಹೆಚ್ಚು ಅಚ್ಚುಮೆಚ್ಚು. ಸದಾ ಜೆಕೆ ಜೊತೆಗೆ ಇರುವ ಶ್ರುತಿ ಪ್ರಕಾಶ್ ಗೆ ಲವ್ ಪ್ರಪೋಸ್ ಮಾಡುವ ಅವಕಾಶ ಚಂದನ್ ಶೆಟ್ಟಿಗೆ ನಿನ್ನೆ ಲಭಿಸಿತು. ಬರೀ ಶ್ರುತಿ ಪ್ರಕಾಶ್ ಗೆ ಮಾತ್ರ ಅಲ್ಲ, ಅನುಪಮಾ ಗೌಡಗೂ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದರು. ಅದು ಅಕುಲ್ ಬಾಲಾಜಿ ಕೃಪೆಯಿಂದ.! ಅಷ್ಟಕ್ಕೂ ಆಗಿದ್ದೇನು.? 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ 'ಬಿಗ್ ಬಾಸ್ ಕನ್ನಡ-2' ವಿಜೇತ ಅಕುಲ್ ಬಾಲಾಜಿ ಎಂಟ್ರಿ ಕೊಟ್ಟಿದ್ದರು. 'ದೊಡ್ಮನೆ'ಯೊಳಗೆ ಅಕುಲ್ ಬಾಲಾಜಿ ಪದಾರ್ಪಣೆ ಮಾಡಿದ್ಮೇಲೆ 'ಅಕುಲ್ ಕಮಾಲ್' ಎಂಬ ವಿಶೇಷ ಚಟುವಟಿಕೆ ಪ್ರಾರಂಭ ಆಯ್ತು.