ಗುಜರಾತ್ ವಿಧಾನಸಭಾ ಚುನಾವಣೆಯ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ | Oneindia Kannada

Oneindia Kannada 2017-12-07

Views 1.2K

ಗುಜರಾತ್ ಅಸೆಂಬ್ಲಿಯ ಮೊದಲ ಹಂತದ ಚುನಾವಣೆಗೆ ಕೇವಲ ಎರಡು ದಿನ ಬಾಕಿ ಉಳಿದಿದೆ. ಡಿಸೆಂಬರ್ 9 ಮತ್ತು 14ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 18ರಂದು ಫಲಿತಾಂಶ ಹೊರ ಬೀಳಲಿದೆ. ಈ ನಡುವೆ ಓಖ್ಹಿ ಚಂಡಮಾರುತದಂತೆ ವಿವಿಧ ಮಾಧ್ಯಮಗಳ ಚುನಾವಣಾಪೂರ್ವ ಸಮೀಕ್ಷೆಗಳು ಒಂದರ ಮೇಲೊಂದು ಬಡೆದಪ್ಪಳಿಸುತ್ತಿದೆ. ಇದರ ಜೊತೆಗೆ, ಖ್ಯಾತ ಜ್ಯೋತಿಷಿಯೊಬ್ಬರೂ ಗುಜರಾತ್ ಚುನಾವಣಾ ಫಲಿತಾಂಶ ಹೀಗೇ ಹೊರಬೀಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.ಅಲಹಾಬಾದ್ ಮೂಲದ ಸದ್ಯ ದೆಹಲಿ ನಿವಾಸಿಯಾಗಿರುವ ಅನಿರುದ್ದ ಕುಮಾರ್ ಮಿಶ್ರಾ ಎನ್ನುವ ಜ್ಯೋತಿಷಿಯೊಬ್ಬರು, ಗುಜರಾತ್ ಚುನಾವಣೆಯಲ್ಲಿ ಗೆಲ್ಲೋದು ಬಿಜೆಪಿಯೇ ಅನ್ನುವ ಭವಿಷ್ಯವನ್ನು ನುಡಿದಿದ್ದಾರೆ. ಮಾಧ್ಯಮಗಳ ಸಮೀಕ್ಷೆಗಳು ಬಹುತೇಕ ಇದನ್ನೇ ಹೇಳುತ್ತಿವೆ.ಯಾರು ಈ ಅನಿರುದ್ದ ಮಿಶ್ರಾ? ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ಹುಟ್ಟಿ, ವಾರಣಾಸಿ, ರಿಷಿಕೇಶ, ಹರಿದ್ವಾರ ಮುಂತಾದ ಧಾರ್ಮಿಕ ಕ್ಷೇತ್ರಗಳಲ್ಲಿ ವೈದಿಕ ಪಾಂಡಿತ್ಯ, ಜ್ಯೋತಿಷ್ಯ ಶಾಸ್ತ್ರವನ್ನೂ ಕಲಿತಿರುವ ಮಿಶ್ರಾ, ಸದ್ಯ ದೆಹಲಿಯಲ್ಲಿ ವಾಸವಾಗಿದ್ದಾರೆ.

Share This Video


Download

  
Report form
RELATED VIDEOS