ಬಿಗ್ ಬಾಸ್ ಕನ್ನಡ ಸೀಸನ್ 5 : ರಿಯಾಜ್ ಬಳಿ ಕ್ಷಮೆ ಕೇಳಿದ ದಿವಾಕರ್ | Oneindia Kannada

Filmibeat Kannada 2017-12-08

Views 1.1K

Bigg Boss Kannada 5: Week 8: After Verbal spat, Diwakar tries speaking to Riyaz. Diwakar asks sorry to Riaz. Will Riaz again speak to Diwakar? Watch Video.


ತಮಗೆ ಸಂಬಂಧ ಪಡೆದೇ ಇದ್ದರೂ... ಮಧ್ಯೆ ಮೂಗು ತೂರಿಸಿ... ಬಾಯಿಗೆ ಬಂದ ಹಾಗೆ ಮಾತನಾಡಿ... ಥೂ ಎಂದು ಉಗಿದು... ಎಷ್ಟೇ ಸಮಾಧಾನ ಮಾಡಿದರೂ ಸುಮ್ಮನಾಗದೆ 'ಬಿಗ್ ಬಾಸ್' ಮನೆಯಲ್ಲಿ ಮಧ್ಯರಾತ್ರಿ ಸೀನ್ ಕ್ರಿಯೇಟ್ ಮಾಡಿದ ದಿವಾಕರ್ ಬಳಿಕ ಅದೇ ರಿಯಾಝ್ ಬಳಿ ಹೋಗಿ ಮಾತನಾಡಲು ಪ್ರಯತ್ನ ಪಟ್ಟರು. ಕೆಲವೇ ನಿಮಿಷಗಳ ಹಿಂದೆಯಷ್ಟೇ ''ನಾಟಕ ಮಾಡ್ತಿದ್ದಾರೆ, ಡ್ರಾಮಾ ಆರ್ಟಿಸ್ಟ್'' ಅಂತೆಲ್ಲ ಕೂಗಾಡಿದ್ದ ದಿವಾಕರ್ ನಂತರ ಕೂಲ್ ಆಗಿ ರಿಯಾಝ್ ಬಳಿ ಹೋಗಿ ''ಕೋಪ ಮಾಡಿಕೊಳ್ಳಬೇಡಿ'' ಅಂದ್ರೆ ಯಾರೇ ಆದರೂ ತಾಳ್ಮೆಯಿಂದ ವರ್ತಿಸಲ್ಲ. ರಿಯಾಝ್ ಮಾಡಿದ್ದೂ ಅದನ್ನೇ.! ಅಷ್ಟಕ್ಕೂ, ರಿಯಾಝ್ ಬಳಿ ದಿವಾಕರ್ ಹೀಗೆ ನಡೆದುಕೊಳ್ಳುತ್ತಿರುವುದು ಇದೇ ಮೊದಲ ಬಾರಿಗೆ ಅಲ್ಲ. ಬರೀ ರಿಯಾಝ್ ಬಳಿ ಮಾತ್ರ ಅಲ್ಲ, ಜಯಶ್ರೀನಿವಾಸನ್ ಬಗ್ಗೆಯೂ ದಿವಾಕರ್ ಮನಬಂದಂತೆ ಮಾತನಾಡುತ್ತಾರೆ. ಇದೇ ವಿಷಯಕ್ಕೆ ದಿವಾಕರ್ ಗೆ ಸುದೀಪ್ ಬುದ್ಧಿ ಹೇಳಿದ್ದರೂ, ಅವರಿಗೆ ಜ್ಞಾನೋದಯ ಆದ ಹಾಗಿಲ್ಲ.

Share This Video


Download

  
Report form
RELATED VIDEOS