'ಬಾಹುಬಲಿ' ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆದ ಬಳಿಕ ಇಡೀ ಭಾರತದಲ್ಲಿ ಪ್ರಭಾಸ್ ಸೆನ್ಸೇಷನಲ್ ಸ್ಟಾರ್ ಆಗ್ಬಿಟ್ಟಿದ್ದಾರೆ. ಪ್ರಭಾಸ್ ಕಂಡ್ರೆ ಪ್ರಾಣ ಬಿಡುವ ಹುಡುಗಿಯರಂತೂ ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ. ಹರೆಯದ ಹುಡುಗಿಯರ ಹೃದಯ ಕದ್ದಿರುವ ಪ್ರಭಾಸ್ ಹಾಗೂ ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗಾಸಿಪ್ ಕೂಡ ಆಗಾಗ ಕೇಳಿ ಬರುತ್ತಲೇ ಇದೆ. ನಟಿ ಅನುಷ್ಕಾ ಶೆಟ್ಟಿ ಕಂಡ್ರೆ 'ಡಾರ್ಲಿಂಗ್' ಪ್ರಭಾಸ್ ಗೆ ಇಷ್ಟ ಇದ್ಯೋ, ಇಲ್ವೋ ಗೊತ್ತಿಲ್ಲ. ಆದ್ರೆ, 'ಈ' ನಟಿ ಅಂದ್ರೆ ಪ್ರಭಾಸ್ ಗೆ ಸಿಕ್ಕಾಪಟ್ಟೆ ಇಷ್ಟ. ಯಾರು ಆ ನಟಿ ಅಂದ್ರಾ.? ಬಾಲಿವುಡ್ ಬ್ಯೂಟಿ ರವೀನಾ ಟಂಡನ್ ಅಂದ್ರೆ ಪ್ರಭಾಸ್ ಗೆ ಅಚ್ಚುಮೆಚ್ಚು. ಪ್ರಭಾಸ್ ಪಾಲಿಗೆ ರವೀನಾ ಟಂಡನ್ ಫೇವರೆಟ್ ನಟಿ. ಅಷ್ಟೇ ಅಲ್ಲ, ರವೀನಾ ಟಂಡನ್ ಮೇಲೆ ಪ್ರಭಾಸ್ ಗೆ ಕ್ರಷ್ ಕೂಡ ಇತ್ತಂತೆ. ಹಾಗಂತ ಸ್ವತಃ ಪ್ರಭಾಸ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.