ಮೋದಿ Vs ರಾಹುಲ್ ಎಂದೇ ಬಿಂಬಿಸಲಾಗುತ್ತಿರುವ ಗುಜರಾತ್ ಅಸೆಂಬ್ಲಿಗೆ ಮೊದಲ ಹಂತದ ಚುನಾವಣೆ ಶನಿವಾರ (ಡಿ 9) ಮುಕ್ತಾಯಗೊಂಡಿದೆ. 89ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಅತ್ಯುತ್ತಮ ಎನ್ನಬಹುದಾದ ಶೇ. 68% ಮತದಾನ ನಡೆದಿದೆ.ಇವಿಎಂ ನಿಷೇಧಿಸಿ ಬ್ಯಾಲೆಟ್ ಪೇಪರ್ ಬಳಸಬೇಕು ಎಂದು ಈಗಾಗಲೇ, ಯುಪಿಎ ಮೈತ್ರಿಕೂಟದ ಸದಸ್ಯರು ನಡೆಸಿದ ಒಂದು ರೌಂಡಿನ ಸಭೆಗೆ ಪುಷ್ಟಿ ನೀಡುವಂತೆ, ಮೊದಲ ಹಂತದ ಚುನಾವಣೆಯಲ್ಲಿ ಇವಿಎಂಗೆ ಸಂಬಂಧ ಪಟ್ಟಂತೆ ಹಲವು ದೂರುಗಳು ದಾಖಲಾಗಿರುವುದರಿಂದ ಚುನಾವಣಾ ಆಯೋಗ ಇರಿಸುಮುರಿಸು ಎದುರಿಸುವಂತಾಗಿದೆ.ಪೋರಬಂದರ್ ಮತ್ತು ಸೂರತ್ ನಗರಗಳಲ್ಲಿ ಮೊಬೈಲ್ ಬ್ಲೂಟೂತ್ ಮೂಲಕ ಇವಿಎಂ ಸಂಪರ್ಕಿಸಿ, ಫೋರ್ಜರಿ ಮತದಾನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಸೂರತ್ ನಗರದ ಸುಮಾರು ಎಪ್ಪತ್ತಕ್ಕೂ ಹೆಚ್ಚು ಇವಿಎಂ/ವಿವಿಪ್ಯಾಟ್ ಮಂತ್ರ ಕೈಕೊಟ್ಟಿದ್ದು ಮತಯಂತ್ರ ದುರ್ಬಳಕೆಯಾಗುತ್ತಿದೆ ಎನ್ನುವ ಗುಲ್ಲೆಬ್ಬಿದೆ.ಸೂರತ್ ಗ್ರಾಮೀಣ ಭಾಗದ ಹದಿನಾರಕ್ಕೂ ಹೆಚ್ಚು ಬೂತ್ ಗಳಲ್ಲಿ ಮತಯಂತ್ರ ದುರ್ಬಳಕೆಯಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಆದರೆ, ಎಲ್ಲಾ ಆರೋಪಗಳನ್ನು ಚುನಾವಣಾ ಆಯೋಗ ಸಾರಸಗಾಟವಾಗಿ ತಳ್ಳಿಹಾಕಿದೆ.
Reports Of EVM, VVPAT Malfunctioning during First Phase Of Gujarat Assembly Elections. Several cases of faulty Electronic Voting Machines (EVM) were reported too at polling booths in Gujarat on Saturday (Dec 9) where the first phase of assembly elections held.