ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೋಮವಾರ ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಘೋಷಣೆ ಮಾಡಿಯೂ ಆಯಿತು.ಕಳೆದ ವಾರ ವಿರಾಟ್ ಕೊಹ್ಲಿ ಹಾಗೂ ನಟಿ ದೇಶ ಬಿಟ್ಟು ತೆರಳಿದ್ದರು. ಆ ಸಂದರ್ಭದಲ್ಲೇ ಹಲವರಿಗೆ ಗುಮಾನಿ ಇತ್ತು. ಕಳೆದ ವಾರಾಂತ್ಯಕ್ಕೆ ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿತ್ತು .ಹ್ಞಾಂ, ಈ ಜೋಡಿ ಮದುವೆಯಾಗಿದ್ದು ಎಲ್ಲಿ ಅಂತಲೇ ಹೇಳಲಿಲ್ಲವಲ್ಲ ಅಂತೀರಾ? ಇಟಲಿ ದೇಶದ ಟಸ್ಕನಿ ಎಂಬಲ್ಲಿ ಅನ್ನೋದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಈ ಸ್ಥಳ ಇರುವುದು ಇಟಲಿಯ ಮಿಲಾನ್ ನಿಂದ ನಾಲ್ಕು ತಾಸು ಪ್ರಯಾಣದಷ್ಟು ದೂರದಲ್ಲಿ. ಜಗತ್ತಿನಲ್ಲೇ ಎರಡನೇ ಅತಿ ದುಬಾರಿ ರಜಾ ತಾಣ ಇದಂತೆ. ಎರಡೂ ಕುಟುಂಬದ ಸದಸ್ಯರು ಹಾಗೂ ಆಯ್ದ ಸ್ನೇಹಿತರಷ್ಟೇ ಮದುವೆಯ ಸಂದರ್ಭದಲ್ಲಿ ಹಾಜರಿದ್ದು, ಶುಭ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
Virat Kohli and Anushka sharma officially announced on their twitter and Insta accounts and here is the highlights of the wedding