Video of the Leader of the opposition in the legislative council
K.S. Eshwarappa viral on social media. In a party workers meeting Koppal
K.S. Eshwarappa said that, party workers never to hesitate from bluffing
to voters to win political support.
ಕರ್ನಾಟಕ ಬಿಜೆಪಿಯಲ್ಲಿ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುವವರು
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ. ಕಳೆದ ವಾರ ಅವರು ನೀಡಿರುವ ಹೇಳಿಕೆ
ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲಿ ಕೆ.ಎಸ್.ಈಶ್ವರಪ್ಪ ಅವರ
ಹೇಳಿಕೆ ಚರ್ಚೆ ನಡೆಯುತ್ತಿದೆ. ಪರ-ವಿರೋಧ ಕಮೆಂಟ್‌ಗಳು ಹರಿದಾಡುತ್ತಿವೆ. ಆದರೆ,
ಈಶ್ವರಪ್ಪ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.ಈಶ್ವರಪ್ಪ
ಹೇಳಿದ್ದೇನು? : ಗಂಗಾವತಿ ತಾಲೂಕಿನ ಕಾಟರಗಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ
ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ ಅವರು, 'ಬಿಜೆಪಿ ಸಾಧನೆಯ ಬಗ್ಗೆ ಏನೂ ಗೊತ್ತಿಲ್ಲ
ಎಂದರೆ ಸುಳ್ಳನಾದರೂ ಹೇಳಿ' ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.'ಹಿಂದೆ
ಬಿಜೆಪಿ ಸರ್ಕಾರವಿದ್ದಾಗ ನಾವು ಏನು ಮಾಡಿದ್ದೆವು. ಮುಂದೆ ಗೆದ್ದರೆ ಏನು ಮಾಡುತ್ತೇವೆ
ಎಂಬುದು ಎಲ್ಲಾ ಕಾರ್ಯಕರ್ತರಿಗೆ ತಿಳಿದಿರಬೇಕು. ಕೇಂದ್ರ ಸರ್ಕಾರದ ಸಾಧನೆ ಏನು ಎಂಬುದು
ತಿಳಿದುಕೊಂಡಿರಬೇಕು. ಇವುಗಳು ತಿಳಿದಿಲ್ಲ ಎಂದರೆ ಸುಳ್ಳನಾದ್ರು ಹೇಳಿ' ಎಂದು ಈಶ್ವರಪ್ಪ ಸಭೆಯಲ್ಲಿ ಹೇಳಿದ್ದಾರೆ.