ಜಗ್ಗೇಶ್ ಗೆ ಥ್ಯಾಂಕ್ಸ್ ಹೇಳಿದ ಗೋಲ್ಡನ್ ಸ್ಟಾರ್ ಗಣೇಶ್ | Filmibeat Kannada

Filmibeat Kannada 2017-12-14

Views 1

Kannada Actor Jaggesh has taken his twitter account to appreciate Golden Star Ganesh starrer Chamak movie.


ನವರಸ ನಾಯಕ ಜಗ್ಗೇಶ್ ಅವರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಥ್ಯಾಂಕ್ಸ್ ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಅದಕ್ಕೆ ಕಾರಣ ಚಮಕ್ ಸಿನಿಮಾ. ಹೌದು, 'ಚಮಕ್' ಚಿತ್ರಕ್ಕೆ ನಟ ಜಗ್ಗೇಶ್ ಧ್ವನಿ ನೀಡಿದ್ದಾರೆ.ಈ ವಿಷ್ಯವನ್ನ ಸ್ವತಃ ಜಗ್ಗೇಶ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ''ಗಣೇಶನ #chamak ಚಿತ್ರ ಅದ್ಭುತ ಮನರಂಜನೆ ಹಾಗು ಮನಸ್ಸಲ್ಲಿ ಉಳಿಯುವ ಎಲ್ಲ ವರ್ಗಕ್ಕು ಸಲ್ಲುವ ಚಿತ್ರ. ಈ ಚಿತ್ರಕ್ಕೆ ನಾನು ಧ್ವನಿ ನೀಡಿ ಅದರ ಸಣ್ಣ ಭಾಗವಾದೆ. ಚಿತ್ರದ ನಿರ್ದೇಶನ, ಛಾಯಾಗ್ರಹಣ, ಗಣೇಶನ ನಟನೆ ಜುಗಲ್ಬಂದಿ ಕನ್ನಡಿಗರಿಗೆ ರಸಕವಳ. '' ಎಂದು ನಟ ಜಗ್ಗೇಶ್ ಬಣ್ಣಿಸಿದ್ದಾರೆ.ಜಗ್ಗೇಶ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಸಿಂಪಲ್ ಸುನಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್, ಜಗ್ಗಣ್ಣನಿಗೆ ಹೃದಯಪೂರ್ವಕ ಧನ್ಯವಾದಗಳನ್ನ ತಿಳಿಸಿದ್ದಾರೆ.ಇದಕ್ಕು ಮುಂಚೆ ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ 'ಮುಗುಳುನಗೆ' ಚಿತ್ರದ ಹಾಡೊಂದರಲ್ಲಿ ಜಗ್ಗೇಶ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು.

Share This Video


Download

  
Report form
RELATED VIDEOS