''ನಾನು ವೈಲ್ಡ್ ಕಾರ್ಡ್ ಸ್ಪರ್ಧಿ'' ಅಂತಲೇ ಬಿಲ್ಡಪ್ ತೆಗೆದುಕೊಂಡು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ನಟಿ ಸಂಯುಕ್ತ ಹೆಗ್ಡೆ ಅದಾಗಲೇ 'ಕಿರಿಕ್' ಶುರು ಮಾಡಿದ್ದಾರೆ.ಜಯಶ್ರೀನಿವಾಸನ್ 'ಸಂಖ್ಯಾಶಾಸ್ತ್ರಕ್ಕೆ ದೊಡ್ಡ ನಮಸ್ಕಾರ' ಹಾಕಿರುವ ಸಂಯುಕ್ತ ಹೆಗ್ಡೆ, ಸಮೀರಾಚಾರ್ಯ ಗೆ 'ಡೀಮ್ಡ್ ಸ್ವಾಮೀಜಿ' ಅಂತ ಪಟ್ಟ ಕೊಟ್ಟಿದ್ದಾರೆ.'ಚಳ್ಳೆಹಣ್ಣು' ತಿನ್ನಿಸುತ್ತಿರುವ ನಿವೇದಿತಾ ಹಾಗೂ 'ಜಗಳಗಂಟ' ಜಗನ್ ಗೆ ಬಿಸಿ ಮುಟ್ಟಿಸಿರುವ ಸಂಯುಕ್ತ ರವರ 'ಬಿಗ್ ಬಾಸ್' ಮನೆಯೊಳಗಿನ 'ಕಿರಿಕ್'ಗಳ ಸಂಪೂರ್ಣ ವಿವರ ಇಲ್ಲಿದೆ.'ಬಿಗ್ ಬಾಸ್' ಮನೆಯೊಳಗೆ ಕಾಲಿಡುತ್ತಿದ್ದಂತೆಯೇ 'ಕಿರಿಕ್' ಶುರು ಮಾಡಿಕೊಂಡ ನಟಿ ಸಂಯುಕ್ತ, ''ಸಂಖ್ಯಾಶಾಸ್ತ್ರಕ್ಕೆ ನಮಸ್ಕಾರ. ಅಷ್ಟೊಂದು ಇದ್ದಿದ್ರೆ, ಅವರ ಸಂಖ್ಯಾಶಾಸ್ತ್ರ ಅವರಿಗೆ ಮೊದಲು ವರ್ಕ್ ಆಗುತ್ತಿತ್ತು. ನನಗೆ ಅವರನ್ನ ಕಂಡ್ರೆ ಇಷ್ಟ ಇಲ್ಲ'' ಅಂತ ಜಯಶ್ರೀನಿವಾಸನ್ ಬಗ್ಗೆ ಸಂಯುಕ್ತ ಕಾಮೆಂಟ್ ಮಾಡಿದರು.''ಸ್ವಾಮಿ ಆಗಬೇಕು ಅಂದ್ರೆ ಎಲ್ಲ ಭೋಗ, ವೈಭೋಗ ಗಳನ್ನೆಲ್ಲ ಬಿಡಬೇಕು. ಇವರು ಸ್ವಾಮಿ ಅಲ್ಲ, ಡೀಮ್ಡ್ ಯೂನಿವರ್ಸಿಟಿ ತರಹ ಇವರು ಡೀಮ್ಡ್ ಸ್ವಾಮೀಜಿ'' ಅಂತ ಹೇಳಿಕೊಂಡು ಸಮೀರಾಚಾರ್ಯ ಜೊತೆಗೂ ವಾದಕ್ಕೆ ಇಳಿದರು ನಟಿ ಸಂಯುಕ್ತ. ''ನಾನು ಸನ್ಯಾಸಿ ಅಲ್ಲ ಗೃಹಸ್ಥ'' ಅಂತ ಸಮೀರಾಚಾರ್ಯ ಹೇಳುತ್ತಿದ್ದರೂ, ಅದನ್ನ ಸಂಯುಕ್ತ ಕೇಳಿಸಿಕೊಳ್ಳಲಿಲ್ಲ.
Bigg Boss Kannada 5: Week 8: big boss is one of the big reality show in colors kannada and there samyutha hegde gave guest entry in to bigg boss house and there she started to comment about contestants