ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯು 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದ ಕೂಡಲೇ ರಾಜ್ಯದ ಕೆಲವೆಡೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಪ್ರಾರಂಭ ಮಾಡಿದ್ದಾರೆ. ಮಹಿಳೆಯರು, ಪುರುಷರು ಬಿಜೆಪಿ ಬಾವುಟಗಳೊಂದಿಗೆ ಮೈಸೂರಿನಲ್ಲಿ ಹಾಗು ರಾಜ್ಯದ ಹಲವೆಡೆ ರಸ್ತೆಗೆ ಇಳಿದು ಕುಣಿದು, ಬಿಜೆಪಿ ಪರ ಘೋಷಣೆ ಕೂಗುತ್ತಿದ್ದಾರೆ. ಬಿಜೆಪಿಸಂಸದ ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡುವ ಮೂಲಕ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ರಾಜ್ಯದ ಎಲ್ಲ ಪ್ರಮುಖ ನಗರ, ತಾಲ್ಲೂಕು ಕೇಂದ್ರಗಳಲ್ಲಿ ಪಟಾಕಿ ಹೊಡೆಯಿರಿ, ಸಿಹಿ ಹಂಚಿ ಸಂಭ್ರಮಿಸಿರಿ, 22 ವರ್ಷಗಳ ನಂತರವೂ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ. ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಬೆಳಗಾವಿ ಕಮಲ ಪಡೆಯಲ್ಲಿ ಸಂಭ್ರಮ ಪ್ರಾರಂಭವಾಗಿದೆ.ಬಿಜೆಪಿ ದಕ್ಷಿಣ ಮತಕ್ಷೇತ್ರದ ಕಚೇರಿ ಬಳಿ ಸೇರಿದ ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಬಣ್ಣದ ಹೊಳಿ ಆಡಿ ಡೋಲು ಭಾರಿಸಿ, ಕುಣಿದು ಘೋಷಣೆ ಕೂಗಿ ಸಂಭ್ರಮ ಆಚರಿಸಿದ್ದಾರೆ.
Gujarat counting has almost reached its climax and people all over in karnataka have started to celebrate.