ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ವಿರುದ್ಧದ ಆಷಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 41ರನ್ ಗಳಿಂದ ಆಸ್ಟ್ರೇಲಿಯಾ ತಂಡ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯ ಗೆದ್ದು ಸರಣಿಯನ್ನು ತನ್ನದಾಗಿಸಿಕೊಂಡಿದೆ. ವಾಕಾ ಮೈದಾನದಲ್ಲಿ ಸ್ಮಿತ್ ಪಡೆಯ ಗೆಲುವಿನ ನಾಗಾಲೋಟಕ್ಕೆ ಮಳೆ ಅಡ್ಡಿಯಾಗುವ ಆತಂಕ ಎದುರಾಗಿತ್ತು. ಆದರೆ, ಜೋಶ್ ಹೇಜಲ್ ವುಡ್ ಅವರು 48ರನ್ನಿತ್ತು 5ವಿಕೆಟ್ ಕಿತ್ತು, ಟೆಸ್ಟ್ ಕ್ರಿಕೆಟ್ ನಲ್ಲಿ 6ನೇ ಬಾರಿಗೆ ಐದಕ್ಕಿಂತ ಹೆಚ್ಚು ವಿಕೆಟ್ ಗಳಿಸಿದ್ದಲ್ಲದೆ, ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 218 ಸ್ಕೋರಿಗೆ ಆಲೌಟ್ ಆಗುವಂತೆ ಮಾಡಿದರು. ಬ್ರಿಸ್ಬೇನ್, ಅಡಿಲೇಡ್ ನಲ್ಲಿ ಸೋಲು ಕಂಡಿದ್ದ ಇಂಗ್ಲೆಂಡ್ ಹಣೆಬರಹ ಪರ್ತ್ ನಲ್ಲೂ ಬದಲಾಗಲಿಲ್ಲ.ಇನ್ನೊಂದೆಡೆ ಇಂಗ್ಲೆಂಡ್ ತಂಡವು ತವರು ನೆಲದಿಂದ ಹೊರಗೆ ಸತತ ಏಳನೇ ಸೋಲು ಕಂಡಿದೆ.
The losing streak continues for England or is it the other way . Australia have held the ashes urn even this year with still 2 matches to spare.