ಗುಜರಾತ್ ಚುನಾವಣಾ ಫಲಿತಾಂಶ 2017 : ಕಾಂಗ್ರೆಸ್ ಸೋಲಿಗೆ ಇವರಿಬ್ಬರೇ ಕಾರಣ | Oneindia Kannada

Oneindia Kannada 2017-12-21

Views 751

We have lost crucial Gujarat and Himachal Pradesh assembly election because of our two Senior Leaders. Former minister and sitting MP from Chikkaballapura Veerappa Moily said, the statement of Mani Shankar Aiyar and Kapil Sibal damaged us during the election.


ರಾಜ್ಯದ ಪ್ರಸಿದ್ದ ದೇವಾಲಯಗಳಿಗೆ ಭೇಟಿ ನೀಡಿದರೂ, ಪಾಟೀದಾರ್ ಆಂದೋಲನ ಸಮಿತಿ, ದಲಿತ ಸಂಘಟನೆಗಳ ಜೊತೆ ಕೈಜೋಡಿಸಿದರೂ, ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಆರನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಪ್ರಧಾನಿ ಮೋದಿ ಜನಪ್ರಿಯತೆ ಕುಸಿದಿದೆ, ಗ್ರಾಮೀಣ ಭಾಗದಲ್ಲಿ ನಾವು ಮೇಲುಗೈ ಸಾಧಿಸಿದ್ದೇವೆ, ನೈತಿಕವಾಗಿ ನಾವೇ ಜಯಗಳಿಸಿದ್ದು ಎಂದು ಕಾಂಗ್ರೆಸ್ ಮುಖಂಡರು ಹೇಳಿಕೊಂಡು ಬಂದರೂ, 'ಸೋಲು ಸೋಲೇ' ಎನ್ನುವ ಸತ್ಯ ಕಾಂಗ್ರೆಸ್ ಮುಖಂಡರಿಗೆ ಕೊನೆಗೂ ಅರಿತಂದಿದೆ. ಗುಜರಾತ್ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಅಂಶವೇನು ಎನ್ನುವುದನ್ನು ಕಾಂಗ್ರೆಸ್ಸಿನ ಹಿರಿಯ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಲಾರಂಭಿಸಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಪ್ರಕಾರ, ಪಕ್ಷದ ಇಬ್ಬರು ಮುಖಂಡರಿಂದಾಗಿ ಕಾಂಗ್ರೆಸ್ ಸೋಲು ಅನುಭವಿಸಿತು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶ ಹೊರಬಿದ್ದ ಎರಡು ದಿನದ ನಂತರ, ಬುಧವಾರದಿಂದ (ಡಿ 20) ಮೂರು ದಿನಗಳ ಕಾಂಗ್ರೆಸ್ ಮುಖಂಡರ 'ಚಿಂತನ ಮಂಥನ' ಕಾರ್ಯಕ್ರಮ ಆರಂಭವಾಗಿದೆ. ಪಕ್ಷದ ಹಲವು ಮೊದಲ ಪಂಕ್ತಿಯ ನಾಯಕರು ಮೊದಲ ದಿನ ಭಾಗವಹಿಸಿದ್ದಾರೆ.

Share This Video


Download

  
Report form
RELATED VIDEOS