10.or D Unboxing and First Impressions! ಮಾರುಕಟ್ಟೆಯಲ್ಲಿ ಅಬ್ಬರ ಸೃಷ್ಠಿಸಲಿದೆ 10.or D ಸ್ಮಾರ್ಟ್‌ಫೋನ್‌..!

Gizbot 2017-12-23

Views 71

ಭಾರತೀಯ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಳ್ಳುತ್ತಿದ್ದು, ಅದರಲ್ಲಿಯೂ ಬಜೆಟ್ ಬೆಲೆಯ ಫೋನ್‌ಗಳು ಹೆಚ್ಚಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಶಿಯೋಮಿ ಬಿಡುಗಡೆ ಮಾಡಿರುವ ರೆಡ್‌ಮಿ 5A ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇದಕ್ಕೆ ಭರ್ಜರಿ ಸ್ಪರ್ಧೆಯನ್ನು ನೀಡುವ ಸಲುವಾಗಿ ಬಂದಿದೆ 10.or D ಸ್ಮಾರ್ಟ್‌ಪೋನ್‌. 10.or ಕಂಪನಿಯೂ ಈಗಾಗಲೇ ಮಾರುಕಟ್ಟೆಗೆ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಎರಡು ಫೋನ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ಹೊಸದಾಗಿ 10.or D ಸ್ಮಾರ್ಟ್‌ಪೋನ್‌ ಪರಿಚಯ ಮಾಡಿದ್ದು, ಕೇವಲ ರೂ.5000ಕ್ಕೆ ದೊರೆಯಲಿರುವ ಸ್ಮಾರ್ಟ್‌ಫೋನ್ ಎಲ್ಲಾ ಫೀಚರ್‌ಗಳನ್ನು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಲಿದೆ. ಮಾರುಕಟ್ಟೆಯಲ್ಲಿ ರೂ.5000ಕ್ಕೆ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದರಲ್ಲಿಯೂ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ ಅನ್ನು ಕಾಣಲು ಸಾಧ್ಯವಲ್ಲಿ ಆದರೆ 10.or D ಸ್ಮಾರ್ಟ್‌ಪೋನ್‌ ನಲ್ಲಿ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಇದು ಅತೀ ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

Share This Video


Download

  
Report form