ಪೆಟ್ರೋಲ್ ಡೀಸೆಲ್ ಬೆಲೆ ದೇಶದೆಲ್ಲೆಡೆ ದುಬಾರಿ | Oneinida Kannada

Oneindia Kannada 2017-12-27

Views 681

ಡೀಸೆಲ್ ಬೆಲೆ ಆಗಸದೆತ್ತರಕ್ಕೆ ಚಿಮ್ಮಿದೆ. ದೆಹಲಿಯಲ್ಲಿ ಅಟ್ಟ ಹತ್ತಿ ಕೂತಿದೆ ಡೀಸೆಲ್ ಬೆಲೆ. ಕೋಲ್ಕತ್ತಾ ಹಾಗೂ ಚೆನ್ನೈನಲ್ಲಿ ಮೂರು ವರ್ಷದ ಗರಿಷ್ಠ ಮಟ್ಟದಲ್ಲಿದೆ. ಉತ್ತಮ ಬೇಡಿಕೆಯಿಂದ ಕಚ್ಚಾ ತೈಲ ಬೆಲ ದರದ ಏರಿಕೆ ಹಾಗೂ ಒಪೆಕ್ ಮತ್ತು ರಷ್ಯಾದಿಂದ ಉತ್ಪಾದನೆ ಕಡಿಮೆ ಮಾಡಿವೆ ಎಂಬುದು ಇಂದಿನ ಸ್ಥಿತಿಗೆ ಕಾರಣ.ಮಂಗಳವಾರದಂದು ಸರಕಾರಿ ತೈಲ ಕಂಪನಿಗಳು ದೆಹಲಿಯಲ್ಲಿ ಡೀಸೆಲ್ ಅನ್ನು ಲೀಟರ್ ಗೆ 59.31 ರುಪಾಯಿಗೆ ಮಾರಾಟ ಮಾಡಿದ್ದರೆ, ಕೋಲ್ಕತ್ತಾದಲ್ಲಿ 61.97 ಹಾಗೂ ಚೆನ್ನೈನಲ್ಲಿ 62.48 ರುಪಾಯಿಗೆ ಮಾರಲಾಗಿದೆ. ಮೂರೂಕಾಲು ವರ್ಷದಲ್ಲೇ ಇದು ಗರಿಷ್ಠ ಮಟ್ಟವಾಗಿದೆ. ಇನ್ನು ಮುಂಬೈನಲ್ಲಿ 62.75 ಇದ್ದು, ಕಳೆದ ಅಕ್ಟೋಬರ್ 3 ನಂತರದ ಹೆಚ್ಚಿನ ದರ ಇದಾಗಿದೆ.ಅಂದಹಾಗೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ ಟಿ ಅಡಿಯಲ್ಲಿ ಇನ್ನೂ ತಂದಿಲ್ಲ. ಸ್ಥಳೀಯವಾಗಿ ಎಷ್ಟು ತೆರಿಗೆ ಹಾಕಲಾಗುತ್ತದೆ ಎಂಬ ಆಧಾರದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬೇರೆ ದರಗಳಿವೆ.
Diesel prices have soared in the country, in Delhi and touching 3 year highs in Kolkata and Chennai as crude oil surges on good demand and production cuts led by OPEC and Russia.

Share This Video


Download

  
Report form
RELATED VIDEOS