ವೈಕುಂಠವೆಂದರೇನೇ ನಾಶವಿಲ್ಲದ್ದು ಎಂದು. ನಮ್ಮ ಜನನ ಮರಣಾದಿ ಅವಸ್ಥೆಗಳೆಲ್ಲವೂ ನಾಶಕ್ಕೊಳಪಟ್ಟಿರುವಂಥವುಗಳು. ಆಸ್ತಿಕರ ಅಂತಿಮ ಕಾಮವು ಮೋಕ್ಷವೇ ಆಗಿದೆ. ಸಾಧನೆಯಿಂದ ಮೋಕ್ಷಪ್ರಾಪ್ತಿ. ವ್ರತ ನಿಯಮಗಳು, ಉಪವಾಸಗಳು ಸಾಧನೆಯ ಸೋಪಾನಗಳು.ಜಗತ್ತಿನ ಬಹುತೇಕ ಎಲ್ಲ ಧರ್ಮಗಳೂ ಉಪವಾಸಕ್ಕೆ ಮಹತ್ವ ನೀಡಿವೆ. ಕ್ರಿಶ್ಚಿಯನ್ನರ ಈಸ್ಟರ್ ಉಪವಾಸವಿರಲಿ, ಮುಸಲ್ಮಾನರ ರಮ್ಜಾನ್ ಇರಲಿ, ಯಹೂದಿಗಳ ಯ್ಯೋಮ್ ಕಿಪ್ಪುರ್ ಇರಲಿ, ಎಲ್ಲವೂ ಮನದ ಏಕಾಗ್ರತೆಗೆ, ತನ್ಮೂಲಕ ಆಧ್ಯಾತ್ಮ ಸಾಧನೆಗೆ ಅದರಿಂದ ಕೈವಲ್ಯಪ್ರಾಪ್ತಿಗೆ ಉಪವಾಸ ಸಹಾಯಕಾರಿ ಎಂಬುದನ್ನು ಮನಗಂಡಿದ್ದಾರೆ.ಕಟ್ಟಳೆಗಳು ಮನವನ್ನು ಹಿಡಿತದಲ್ಲಿರಿಸುತ್ತವೆ. ಧರ್ಮವು ಒಂದು ಉಪಕರಣ ಮಾತ್ರ. ಹೇಗೆ 'ಕೆಜಿ'ಯಿಂದ 'ಪಿಜಿ', ಅದರ ನಂತರದ ಉಚ್ಚ ಶಿಕ್ಷಣಕ್ಕೆ ಅವಿರತ ಸಾಧನೆಯು ಮುಖ್ಯವೋ ಹಾಗೆಯೇ ಮೋಕ್ಷ ಸಾಧನೆಗೆ, ಸ್ನಾನದ ಮೂಲಕ ದೇಹ ಶುದ್ಧಿ ಮಾಡಿಕೊಳ್ಳುವುದರಿಂದ ಮೊದಲ್ಗೊಂಡು ಯೋಗದ ಮೂಲಕ ಸಮಾಧಿಯನ್ನು ಸಾಧಿಸುವುದರ ಹಂತದಲ್ಲಿ ನಾನಾ ವ್ರತ ನಿಯಾಮಾದಿಗಳು.
What is the significance of Vaikunta Ekadasi? Why devotees fast on that day?. It is widely believed that the gates to the heaven open - the Gate of Vaikuntha - on the Vaikunta Ekadasi day(Dec 29 this year). It is one of the most auspicious days in Vishnu Temples in South India. On this occasion, JDS MLC T A Sharavana distributes 1 lakh Laddus on 27th December 2017 On behalf of Vaikunta Ekadasi Special & Free Distribution for Venkateshwara Temples By T A Sharavana MlC at Basavangudi, Shree Sai Gold Palace Party Hall 3rd Floor DVG Road, Basavanagudi.