ಬಿಗ್ ಬಾಸ್ ಕೊಟ್ಟ ಷಾಕಿಂಗ್ ಎಲಿಮಿನೇಷನ್ | ಇದರ ಮರ್ಮ ಏನು? | Filmibeat Kannada

Filmibeat Kannada 2017-12-28

Views 1.6K

Bigg Boss Kannada 5: Week 11: Elimination process commenced at 3 AM at Bigg Boss house. Shruti Prakash, Diwakar and Sameeracharya are in bottom three. Will the elimination process happen and eliminated contestant sent to secret room.?


'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿಗಳು ಹನ್ನೊಂದನೇ ವಾರಕ್ಕೆ ಕಾಲಿಡುತ್ತಿದ್ದಂತೆಯೇ, ಶಾಕ್ ಮೇಲೆ ಶಾಕ್... ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿದ್ದಾರೆ 'ಬಿಗ್ ಬಾಸ್'.ಮೊದಲನೆಯದಾಗಿ, ನಾಮಿನೇಷನ್ ಪ್ರಕ್ರಿಯೆ ಮುಗಿದ್ಮೇಲೆ.. ಯಾರ್ಯಾರು ನಾಮಿನೇಟ್ ಆಗಿದ್ದಾರೆ ಅಂತ 'ಬಿಗ್ ಬಾಸ್' ಘೋಷಿಸಲಿಲ್ಲ. ಎರಡನೆಯದಾಗಿ, ಇದ್ದಕ್ಕಿದ್ದಂತೆ 'ಬಿಗ್ ಬಾಸ್' ಮನೆಯಿಂದ ಜಯಶ್ರೀನಿವಾಸನ್ ನಾಪತ್ತೆ ಆದರು.ಒಂದ್ಕಡೆ, ಜಯಶ್ರೀನಿವಾಸನ್ ಎಲ್ಲಿ ಹೋದರು ಎಂಬ ಪ್ರಶ್ನೆ ಸ್ಪರ್ಧಿಗಳಿಗೆ ಕಾಡುತ್ತಿದೆ. ಇನ್ನೊಂದ್ಕಡೆ, ಯಾರ್ಯಾರು ಡೇಂಜರ್ ಝೋನ್ ನಲ್ಲಿ ಇದ್ದಾರೆ ಎಂಬ ಅರಿವು ಇಲ್ಲದೇ ಆಟ ಆಡುತ್ತಿರುವ ಸ್ಪರ್ಧಿಗಳಿಗೆ ಮಧ್ಯ ರಾತ್ರಿ ಸಖತ್ತಾಗಿ ಶಾಕ್ ಕೊಟ್ಟಿದ್ದಾರೆ 'ಬಿಗ್ ಬಾಸ್'. ಆಗಿನ್ನೂ ಮಧ್ಯರಾತ್ರಿ ಮೂರು ಗಂಟೆ... ಸ್ಪರ್ಧಿಗಳೆಲ್ಲ ಗಾಢ ನಿದ್ದೆಯಲ್ಲಿ ಇರುವಾಗಲೇ, ''ಎಲಿಮಿನೇಷನ್'' ಪ್ರಕ್ರಿಯೆಗೆ 'ಬಿಗ್ ಬಾಸ್' ಚಾಲನೆ ನೀಡಿದರು.ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದ ಕೃಷಿಯನ್ನ 'ಬಿಗ್ ಬಾಸ್' ಮೊದಲು ಸೇಫ್ ಮಾಡಿದರು. ಬೆಡ್ ರೂಮ್ ನಲ್ಲಿ ಇದ್ದ ಕೃಷಿ ಜೊತೆಗೆ ಜೆಕೆ ಕೂಡ ಸುರಕ್ಷಿತರಾದರು.

Share This Video


Download

  
Report form
RELATED VIDEOS