ಸಿದ್ದರಾಮಯ್ಯಗೆ ಅಲರ್ಟ್ ಮಾಡಿದ ಗುಪ್ತಚರ ಇಲಾಖೆ | Oneindia Kannada

Oneindia Kannada 2017-12-29

Views 2K

As per State intelligence report Chamundeshwari constituency is not safe for Chief Minister Siddaramaiah. Is there is any chance of Siddaramaiah contesting from Hebbal (Bengaluru limit)?

ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಯ ವಿಚಾರದಲ್ಲಿ ರಾಜ್ಯ ಗುಪ್ತಚರ ಇಲಾಖೆ ಈಗಾಗಲೇ ಒಂದು ರೌಂಡಿನ ರಿಪೋರ್ಟ್ ಅನ್ನು ನೀಡಿತ್ತು ಎನ್ನುವ ವರದಿಗಳ ನಡುವೆ, ಇಲಾಖೆ ಮತ್ತೊಂದು ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದಲ್ಲಿ ಪ್ರಚಾರ ಮಾಡಿದಷ್ಟು ಬಿಜೆಪಿಗೆ ಲಾಭವಾಗಲಿದೆ ಎನ್ನುವ ಹಿಂದಿನ ವರದಿಯ ನಂತರ, ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳು ಮುಂದಿನ ಚುನಾವಣೆಯಲ್ಲಿ ತಾವು ಕಣಕ್ಕಿಳಿಯಲು ನಿರ್ಧರಿಸಿರುವ ಕ್ಷೇತ್ರ 'ಸೇಫ್' ಅಲ್ಲ ಎನ್ನುವ ಮಾಹಿತಿಯನ್ನು ನೀಡಿದೆ ಎಂದು ತಿಳಿದು ಬಂದಿದೆ.ತನ್ನ ವಿರುದ್ದ ಎಸಿಬಿ ದಾಳ ಪ್ರಯೋಗಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ನನ್ನ ವಿರುದ್ದ ಕಣಕ್ಕಿಳಿಯಲು ಸೋಲಿನ ಭೀತಿ ಕಾಡುತ್ತಿದೆ ಎಂದು ಇತ್ತೀಚೆಗಷ್ಟೇ ಚಾಮುಂಡೇಶ್ವರಿ ಕ್ಷೇತ್ರದ ಹಾಲೀ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ, ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದರು.ತನ್ನನ್ನು ಸೋಲಿಸಲು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಬಿಜೆಪಿಯ ಜೊತೆ ಸ್ಥಳೀಯ ಪ್ರಭಾವಿ ಮುಖಂಡರು ಬೆಂಬಲಿಸುವ ಸಾಧ್ಯತೆಯ ರಾಜಕೀಯ ಲೆಕ್ಕಾಚಾರ ಅರಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

Share This Video


Download

  
Report form
RELATED VIDEOS