ಹರಹರ ಮಹಾದೇವಾ ಸ್ಟಾರ್ ಸುವರ್ಣ ಚಾಲೆನ್ ನಲ್ಲಿ ಪ್ರತಿನಿತ್ಯ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ. ಕಿರುತೆರೆಯಲ್ಲಿ ಹೊಸ ಪ್ರಯತ್ನದ ಮೂಲಕ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾದ ಹರಹರ ಮಹಾದೇವಾ ಧಾರಾವಾಹಿಯನ್ನ ಕನ್ನಡ ಪ್ರೇಕ್ಷಕರು ತುಂಬಾನೇ ಮೆಚ್ಚಿಕೊಂಡಿದ್ದರು.ಸ್ಟಾರ್ ಸುವರ್ಣ ತಂಡ ಹಾಗೂ ಧಾರಾವಾಹಿಯ ಕಲಾವಿದರು ಪಾತ್ರಕ್ಕಾಗಿ ಸಾಕಷ್ಟು ತಯಾರಿಗಳನ್ನ ಮಾಡಿಕೊಂಡಿದ್ದರು. 'ದೇವೊಂಕಿ ದೇವ್ ಮಹಾದೇವ್' ಹೆಸರಿನಲ್ಲಿ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯೇ ಕನ್ನದಲ್ಲಿ ಹರ ಹರ ಮಹಾದೇವಾ ಆಗಿತ್ತು.
ಎಂದೂ ನೋಡಿರದ ಸೆಟ್ ಗಳು, ಗ್ರಾಫಿಕ್ಸ್ ಎಫೆಕ್ಟ್ ಎಲ್ಲವನ್ನೂ ಬಳಸಿಕೊಂಡು ಧಾರಾವಾಹಿಯನ್ನ ಚಿತ್ರೀಕರಿಸಲಾಗುತ್ತಿತ್ತು. ಆರಂಭದಲ್ಲಿ ಶಿವನ ಚರಿತ್ರೆಯನ್ನ ನೋಡಲು ಉತ್ಸಾಹದಿಂದ ಕೂಡಿದ ಪ್ರೇಕ್ಷಕರು ಅದ್ಯಾಕೋ ಇತ್ತೀಚಿಗೆ ಶಿವನನ್ನ ನೋಡಲು ಟಿವಿ ಮುಂದೆ ಕುಳಿತುಕೊಳ್ಳಲ್ಲ ಅಂತಿದ್ದಾರೆ. ಇದರಿಂದ ಬೇಸತ್ತಿರೋ ಸ್ಟಾರ್ ಸುವರ್ಣ ಟೀಂ 'ಹರ ಹರ ಮಹಾದೇವಾ' ಧಾರಾವಾಹಿಯನ್ನು ನಿಲ್ಲಿಸಲು ನಿರ್ಧಾರ ಮಾಡಿದ್ಯಂತೆ.