ನಾಡಪ್ರಭು ಕೆಂಪೇಗೌಡ ಬಡಾವಣೆಯ 2 ನೇ ಹಂತದಲ್ಲಿನ 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಹೊಸ ವರ್ಷಕ್ಕೆ ಸಾರ್ವಜನಿಕರಿಗೆ ಭರ್ಜರಿ ಕೊಡುಗೆ ನೀಡಲಿದೆ.ಗುರುವಾರದಿಂದಲೇ ಅರ್ಜಿ ಫಾರಂಗಳು ವಿವಿಧ ಬ್ಯಾಂಕ್ ಗಳಲ್ಲಿ ಲಭ್ಯವಿದ್ದು, ಫೆ.9 ರವರೆಗೆ ನಿಗದಿತ ಅರ್ಜಿ ಶುಲ್ಕ ಹಾಗೂ ಆರಂಭಿಕ ಠೇವಣಿ ಪಾವತಿಸಿ, ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 2015ರ ನವೆಂಬರ್ ನಲ್ಲಿ ರಾಜ್ಯೋತ್ಸವ ಕೊಡುಗೆಯಾಗಿ 5 ಸಾವಿರ ಸೈಟ್ ಗಳನ್ನು ಮೊದಲ ಹಂತದಲ್ಲಿ ಹಂಚಿಕೆ ಮಾಡಲು ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಆರ್ಥಿಕವಾಗಿ ಹಿಂದುಳಿದ ವರ್ಗ ಹಾಗೂ ಬಿಡಿಎ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ, ಸಿಗದೆ ಇರುವವರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ.ಬಡಾವಣೆಯ ಮೊದಲ ಹಂತದಲ್ಲಿ ನಿಗದಿ ಮಾಡಲಾಗಿದ್ದ ಮೌಲ್ಯವನ್ನೇ ಕಾಯ್ದಿರಿಸಿ ಬಿಡಿಎ, ದೊಡ್ಡ ಅಳತೆಯ ನಿವೇಶನಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ನೋಟು ಬ್ಯಾನ್ ಬಳಿಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾಕಷ್ಟು ಏರುಪೇರುಗಳಾಗಿದ್ದು ಅಲ್ಲದೆ ಕಳೆದ ಬಾರಿ ನಿವೇಶನ ಮೌಲ್ಯ ಹೆಚ್ಚಸಿರುವ ಕಾರಣಕ್ಕೆ 450 ಕ್ಕೂ ಅಧಿಕ ಮಂದಿ ಹಂಚಿಕೆಯಾದ ಸೈಟ್ ಗಳನ್ನು ಹಿಂದಿರುಗಿಸಿದ್ದರು. 50/80 ಚದರಡಿಯ ಸೈಟ್ ಗಳ ಸಂಖ್ಯೆಯನ್ನು 500 ರಿಂದ 300ಕ್ಕೆ ಹಾಗೂ 40/60 ಚದರಡಿಯ ಸೈಟ್ ಗಳ ಸಂಖ್ಯೆಯನ್ನು1 ಸಾವಿರದಿಂದ 700ಕ್ಕೆ ಇಳಿಕೆ ಮಾಡಲಾಗಿದೆ. ಬದಲಾಗಿ 30/40 ಚದರಡಿಯ ಸೈಟ್ ಗಳನ್ನು 2 ಸಾವಿರದಿಂದ 2500ಕ್ಕೆ ಹೆಚ್ಚಳ ಮಾಡಲಾಗಿದೆ.
Bengaluru Development Authority has issued notification for allotment of five thousand residential sites in Nadaprabhu Kempegowda layout. Aspirants can apply till February 9 2018.