ಮುಂಬೈನ ಕಮಲಾ ಮಿಲ್ಸ್ ಕಾಂಪೌಂಡ್ ನಲ್ಲಿ ಭೀಕರ ಅಗ್ನಿ ದುರಂತ | Oneindia Kannada

Oneindia Kannada 2017-12-29

Views 2.7K

How did the fire accident happen in 1 Above hotel in Mumbai? Why the women including the birthday woman Khushboo could not escape and got stuck in the bathroom? Is there any nexus between businessmen and BMC officials? Only transparent investigation can unearth the truth.

ಹೊಸವರ್ಷದ ಸಂಭ್ರಮಾಚರಣೆಯನ್ನು ಸುಟ್ಟು ಭಸ್ಮ ಮಾಡುವಂಥ ಘಟನೆ ಮುಂಬೈನ ಲೋವರ್ ಪಾರೆಲ್ ಪ್ರದೇಶದಲ್ಲಿರುವ ಕಮಲಾ ಮಿಲ್ಸ್ ಕಾಂಪೌಂಡ್ ನಲ್ಲಿರುವ 1 Above ಹೋಟೆಲಿನಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಸತ್ತವರ ಸಂಖ್ಯೆ 14ಕ್ಕೇರಿದೆ. ಬೆಚ್ಚಿಬೀಳಿಸುವಂಥ ಈ ಘಟನೆಯ ಹಿಂದೆ ಉದ್ಯಮಿಗಳು ಮತ್ತು ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳ ಅಪವಿತ್ರ ಮೈತ್ರಿಯೇ ಕಾರಣವೆಂದು ಹೇಳಲಾಗುತ್ತಿದೆ. ಲಂಚ ಪಡೆದು ಲೈಸೆನ್ಸ್ ನೀಡಿದ್ದಕ್ಕೆ 14 ಅಮಾಯಕ ಜೀವಗಳನ್ನು ಕಳೆದುಕೊಳ್ಳುವಂತಾಗಿದೆ.ಈಗಿರುವ ಹೋಟೆಲ್ ಜಾಗದಲ್ಲಿ ಕೆಲವೇ ತಿಂಗಳ ಹಿಂದೆ ಇದ್ದದ್ದು ಕೇವಲ ಒಂದು ಶೆಡ್ ಮಾತ್ರ. ಅಕ್ರಮವೆಸಗಿ ಅದನ್ನು ನಿರ್ಮಿಸಿದ್ದರಿಂದ ಅದನ್ನು ಅಧಿಕಾರಿಗಳು ಧ್ವಂಸ ಮಾಡಿದ್ದರು. ಆದರೆ, ಅದೇ ಜಾಗದಲ್ಲಿ ಮೂರಂತಸ್ತಿನ ಕಟ್ಟಡವನ್ನು ಉದ್ಯಮಿ ಮತ್ತೆ ಕಟ್ಟಿದ್ದ. ಹೋಟೆಲಿನ ಮೂರನೇ ಮಹಡಿಯಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಲ್ಲಿ ಬೆಂಕಿ ಬೇಗ ಆವರಿಸಿಕೊಳ್ಳುವಂಥ ಟಾರ್ಪಾಲಿನ್, ಪ್ಲಾಸ್ಟಿಕ್ ವಸ್ತುಗಳೇ ಇದ್ದಿದ್ದರಿಂದ ಅಗ್ನಿಶಾಮಕ ದಳದವರಿಗೂ ಬೇಗನೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.

Share This Video


Download

  
Report form