ರಶ್ಮಿಕಾ ಮಂದಣ್ಣ ಮೇಲೆ ರಕ್ಷಿತ್ ಶೆಟ್ಟಿ ಗೆ ಮತ್ತೆ ಲವ್ವಾಯ್ತಂತೆ | Filmibeat Kannada

Filmibeat Kannada 2017-12-30

Views 3

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಆದ ನಂತರ ರಕ್ಷಿತ್ ಅಭಿನಯದ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಆದ್ರೆ, ರಶ್ಮಿಕಾ ಅಭಿನಯದ ಎರಡು ಚಿತ್ರಗಳು ತೆರೆಕಂಡಿದೆ. ಪುನೀತ್ ಜೊತೆ 'ಅಂಜನಿಪುತ್ರ' ಮತ್ತು ಗಣೇಶ್ ಜೊತೆ ಕಾಣಿಸಿಕೊಂಡ 'ಚಮಕ್'. ಇದೀಗ, ಗಣೀ ಮತ್ತು ರಶ್ಮಿಕಾ ಜೋಡಿಯ 'ಚಮಕ್' ಚಿತ್ರವನ್ನ ರಕ್ಷಿತ್ ಶೆಟ್ಟಿ ನೋಡಿ ಮೆಚ್ಚಿಕೊಂಡಿದ್ದಾರೆ. ಮುಖ್ಯ ಚಿತ್ರಮಂದಿರದಲ್ಲಿ ಭಾವಿ ಪತ್ನಿಯೊಂದಿಗೆ ಮೊದಲ ಶೋ ಸಿನಿಮಾ ನೋಡಿದ ರಕ್ಷಿತ್ ತಮ್ಮ ವಿಮರ್ಶೆ ಬರೆದುಕೊಂಡಿದ್ದಾರೆ.'ಚಮಕ್' ಚಿತ್ರದಲ್ಲಿ ಏನು ಇಷ್ಟವಾಯ್ತು? ಗಣೇಶ್ ಅಭಿನಯ, ರಶ್ಮಿಕಾ ಅಭಿನಯ ಮತ್ತು ಸಿಂಪಲ್ ಸುನಿಯ ನಿರ್ದೇಶನದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ''ಚಮಕ್ ಚಿತ್ರದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾರೇ ಅದ್ಭುತ. ಪೂರ್ತಿ ಸಿನಿಮಾ ತುಂಬ ಇಷ್ಟ ಆಯ್ತು. ಗಣೇಶ್ ಸರ್ ಅವರ ಅಭಿನಯ ಟಾಪ್ ಕ್ಲಾಸ್. ರಶ್ಮಿಕಾ ನೋಟ ಆಕರ್ಷಕವಾಗಿದೆ ಮತ್ತು ನಟನೆಯಲ್ಲಿ ಮೋಡಿ ಮಾಡ್ತಾರೆ.'' - ರಕ್ಷಿತ್ ಶೆಟ್ಟಿ, ನಟ

Kannada actor Rakshit Shetty has taken his twitter account to praise Golden Star Ganesh and Rashmika Mandanna starrer Chamak Movie. Chamak movie was released yesterday (December 29th). Rakshit Shetty says, he fell in love again with Rashmika Mandanna after watching Chamak Movie

Share This Video


Download

  
Report form
RELATED VIDEOS