Mahadayi water dispute news now trending in Karnataka. Manjunath who is from Mandya district writes letter to former minister and MLA Ambareesh regarding this issue. He has raised some questions. Watch video to know more.
ಮಾಜಿ ಸಚಿವ- ಮಂಡ್ಯ ಶಾಸಕ ಅಂಬರೀಶ್ ಅವರಿಗೆ ಮಂಡ್ಯದಿಂದ ಪತ್ರವೊಂದು ಬರೆದಿದ್ದು, ಆ ಪತ್ರವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ತಮ್ಮ ಸಿಟ್ಟು, ಆಕ್ರೋಶಕ್ಕೆ ಮೊನಚಾದ ಮಾತು-ವ್ಯಂಗ್ಯದ ರೂಪ ನೀಡಿದ್ದಾರೆ. ಕಾವೇರಿ ವಿಚಾರದಲ್ಲಿ ಕಣ್ಮರೆಯಾಗಿದ್ದ ಅಂಬರೀಶಣ್ಣ ಇಂದು ನೀವು ಮಹಾದಾಯಿ ವಿಚಾರದಲ್ಲಿ ಪ್ರತ್ಯಕ್ಷರಾಗಿದ್ದೀರಿ ಇದು ನಿಮ್ಮ ಅಭಿಮಾನಿಯಾದ ನನಗೆ ಸಂತಸ ತಂದಿದೆ. ಅಂಬರೀಶಣ್ಣ ಇದು ನಿಮಗೆ ತಿಳಿದಿಲ್ಲವೇ? ಮಹದಾಯಿ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಸೋನಿಯಾ ಗಾಂಧಿಯವರು ರಾಜ್ಯಕ್ಕೆ ಒಂದು ಹನಿ ನೀರು ಕೊಡಲ್ಲ ಎಂದಿದ್ದರು.ಯೋಜನೆ ಜಾರಿಗೆ ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಿ, ಕಾಮಗಾರಿ ಶುರು ಮಾಡಿದ್ದು ಸನ್ಮಾನ್ಯ ಯಡಿಯೂರಪ್ಪ ಅವರಲ್ಲವೇ? ಇದು ನಿಮಗೆ ತಿಳಿದಿಲ್ಲವೇ ಅಂಬರೀಶಣ್ಣ? ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಕುರಿತು ನ್ಯಾಯಾಧೀಕರಣಕ್ಕೆ ಗೋವಾ ಸಿಎಂ ಸ್ಪಷ್ಟ ಸಂದೇಶ ನೀಡಿದ್ದಾರೆ.