ಮೇಘನಾ ರಾಜ್ ಎಲ್ಲಾ ಸ್ಯಾಂಡಲ್ ವುಡ್ ಸ್ಟಾರ್ ಗಳನ್ನ ಹಿಂದಿಕ್ಕಿದ ನಟಿ | Filmibeat Kannada

Filmibeat Kannada 2018-01-04

Views 28

Kannada Actress Meghana Raj has more followers in Kannada film industry. She has over 25 lakh followers in her Facebook account. Meghana Raj beats all the Sandalwood Stars.


ಸಾಮಾನ್ಯವಾಗಿ ಹೀರೋಗಳಿಗೆ ಹೆಚ್ಚು ಫಾಲೋವರ್ಸ್ ಮತ್ತು ಅಭಿಮಾನಿಗಳು ಇರ್ತಾರೆ ಎನ್ನುವುದು ನಂಬಿಕೆ ಹಾಗೂ ಅದು ಸತ್ಯ ಕೂಡ ಹೌದು. ಅದರಲ್ಲೂ ಕನ್ನಡದ ಸ್ಟಾರ್ ನಟರ ವಿಚಾರದಲ್ಲಿ ಇದು ನಿಜ. ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್, ಹೀಗೆ ಬಹುತೇಕ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಫಾಲೋವರ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನು ನಾಯಕಿಯರ ವಿಚಾರಕ್ಕೆ ಬಂದ್ರೆ ರಮ್ಯಾ, ರಕ್ಷಿತಾ, ರಾಧಿಕಾ ಪಂಡಿತ್, ರಚಿತಾ ರಾಮ್ ಸೇರಿದಂತೆ ಹಲವು ನಾಯಕಿಯರು ಥಟ್ ಅಂತ ನೆನಪಾಗ್ತಾರೆ. ಆದ್ರೆ, ಫಾಲೋವರ್ಸ್ ಈ ವಿಚಾರಕ್ಕೆ ಬಂದ್ರೆ, ಸ್ಯಾಂಡಲ್ ವುಡ್ ನ ಎಲ್ಲ ಹೀರೋ, ಹೀರೋಯಿನ್ ಗಳನ್ನ ನಟಿ ಮೇಘನಾ ರಾಜ್ ಹಿಂದಿಕ್ಕಿದ್ದಾರೆ. ಮೇಘನಾ ರಾಜ್ ಕನ್ನಡದಲ್ಲಿ ಅತಿ ಹೆಚ್ಚು ಫೇಸ್ ಬುಕ್ ಫಾಲೋವರ್ಸ್ ಹೊಂದಿರುವ ನಟಿ. 25 ಲಕ್ಷಕ್ಕೂ (25,08,492) ಹೆಚ್ಚು ಮಂದಿ ಮೇಘನಾ ಅವರನ್ನ ಫಾಲೋ ಮಾಡ್ತಿದ್ದಾರೆ.

Share This Video


Download

  
Report form
RELATED VIDEOS