As per Kannada daily report, Energy Minister D K Shivakumar and his brother, MP D K Suresh internal clash over Channapatna Congress ticket for the upcoming Assembly election. D K Suresh demanding ticket for his brother-in-law (sisters husband).
ಕರ್ನಾಟಕ ರಾಜಕೀಯದಲ್ಲಿ 'ಅಪೂರ್ವ ಸಹೋದರ'ರಂತೆ ಇರುವ ಇಂಧನ ಸಚಿವ ಡಿ ಕೆ ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ನಡುವೆ ಎಲ್ಲವೂ ಸರಿಯಿಲ್ಲವೇ? ಹೌದು ಎನ್ನುತ್ತದೆ ಕೆಲವೊಂದು ಮೂಲಗಳು.ಮುಂಬರುವ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಿಂದ ಯಾರು ಸ್ಪರ್ಧಿಸಬೇಕು ಎನ್ನುವ ವಿಚಾರದಲ್ಲಿ ಸಹೋದರರಿಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ಸಹೋದರನ ಗೆಲುವಿಗಾಗಿ ಸಿ ಪಿ ಯೋಗೇಶ್ವರ್ ಜೊತೆ ಡಿ ಕೆ ಶಿವಕುಮಾರ್ ಕೈಜೋಡಿಸಿದ್ದರು. ಆದರೆ, ಇವರಿಬ್ಬರ ನಡುವಿನ ಸಂಬಂಧ ಈಗ ಹಳಸಿರುವುದರಿಂದ ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ, ಯೋಗೇಶ್ವರ್ ಅವರನ್ನು ಸೋಲಿಸಲೇಬೇಕೆಂದು ಡಿಕೆಶಿ ಪಣ ತೊಟ್ಟಿದ್ದಾರೆ.ಯೋಗೇಶ್ವರ್ ಅವರನ್ನು ಸೋಲಿಸಲು ತಮ್ಮ ಬದ್ದ ರಾಜಕೀಯ ವಿರೋಧಿ ಎಚ್ ಡಿ ದೇವೇಗೌಡ ಕುಟುಂಬದ ಸೊಸೆ ಅನಿತಾ ಕುಮಾರಸ್ವಾಮಿಗೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಡಿಕೆಶಿ ಬೆಂಬಲ ಸೂಚಿಸುವ ಸಾಧ್ಯತೆಯ ಬಗ್ಗೆಯೂ ವರದಿಯಾಗಿತ್ತು.