Uttar Pradesh Chief Minister Yogi Adityanath participated in the 'Parivartana Yatra' rally in Vijayanagar, Bengaluru today. In which Yogi teaches about developments to Siddaramaih. People are angry about this and tweeted with #HogappaYogi hash-tag.
ನಗರದ ವಿಜಯನಗರದಲ್ಲಿ ಇಂದು ನಡೆದ 'ಪರಿವರ್ತನಾ ಯಾತ್ರೆ'ಯ ಸಮಾವೇಶದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದರು. ಈ ವೇಳೆ ಯೋಗಿ ಆಡಿರುವ ಮಾತುಗಳು ಕಾಂಗ್ರೆಸ್ ಹಾಗೂ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿನ್ನಲೆಯಲ್ಲಿ #HogappaYogi ಹ್ಯಾಷ್ ಟ್ಯಾಗ್ ಹಾಕಿ ಜನರು ಯೋಗಿ ಆದಿತ್ಯನಾಥ್ ಗೆ ಮಂಗಳಾರತಿ ಎತ್ತುತ್ತಿದ್ದು, ಟ್ಟಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕರ್ನಾಟಕ ಕಾಂಗ್ರೆಸ್ ಸೇರಿದಂತೆ ಹಲವರು ಉತ್ತರ ಪ್ರದೇಶದ ಪರಿಸ್ಥಿತಿ ಮತ್ತು ಕರ್ನಾಟಕದ ಪರಿಸ್ಥಿತಿಯನ್ನು ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕಕ್ಕೆ ಬುದ್ಧಿ ಹೇಳಲು ಬರಬೇಡಿ ಎಂದು ಯೋಗಿ ಆದಿತ್ಯನಾಥ್ ರನ್ನು ಝಾಡಿಸಿದ್ದಾರೆ."ಹಿಂಸಾಚಾರವನ್ನು ಪ್ರಚೋದಿಸುವ ಯೋಗಿಯಂತಹ ಕೋಮುವಾದಿ ವ್ಯಕ್ತಿ ಕರ್ನಾಟಕಕ್ಕೆ ಬುದ್ಧಿ ಹೇಳಲು ಬರುವುದು ಬೇಡ. ದಯವಿಟ್ಟು ನಿಮ್ಮ ಸ್ವಂತ ರಾಜ್ಯದ ಬಗ್ಗೆ ನೋಡಿ. ಅಭಿವೃದ್ಧಿ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ ನಾವು ನಿಮ್ಮಿಂದ ತುಂಬಾ ಮುಂದಿದ್ದೇವೆ,"