ಇಂದಿನ ದಿನದಲ್ಲಿ ಪ್ರತಿಯೊಂದು ಸರಿಕಾರಿ ಸೇವೆಯನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಎನ್ನುವ ಸ್ಥಿತಿಯನ್ನು ಕೇಂದ್ರ ಸರಕಾರವೂ ನಿರ್ಮಿಸುತ್ತಿದೆ. ಇದಲ್ಲದೇ ಅನೇಕ ಸೇವೆಗಳಿಗೆ ಆಧಾರ್ ಲಿಂಕ್ ಮಾಡಲು ಆದೇಶವನ್ನು ನೀಡಿದೆ. ಇದಕ್ಕೆ ಡೆಡ್ ಲೈನ್ ಸಹ ವಿಧಿಸಲಾಗಿದೆ ಎನ್ನಲಾಗಿದೆ. ಈಗಾಗಲೇ ಬ್ಯಾಂಕ್ ಆಕೌಂಟ್, ಪ್ಯಾನ್ ಕಾರ್ಡ್ ಮತ್ತು ಮೊಬೈಲ್ ನಂಬರ್ ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವಂತೆ ಕೇಂದ್ರ ಸರಕಾರವೂ ಆದೇಶವನ್ನು ನೀಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಆಧಾರ್ ಬಳಕೆ ಹಲವು ಸ್ಥಳಗಳಲ್ಲಿ ಕಡ್ಡಾಯವಾಗಲಿದೆ. ಈ ಹಿನ್ನಲೆಯಲ್ಲಿ e ಆಧಾರ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಸಿಕೊಡುವ ಪ್ರಯತ್ನವಾಗಿದೆ.ಈಗಾಗಲೇ ಆಧಾರ್ ಅತ್ಯವಶ್ಯಕ ದಾಖಲಾತಿಯಾಗಿದ್ದು, ಈ ಹಿನ್ನಲೆಯಲ್ಲಿ ಎಲ್ಲಾ ಕಡೆಗೂ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗುವುದು ಸೇಫ್ ಅಲ್ಲ ಈ ಹಿನ್ನಲೆಯಲ್ಲಿ ನಿಮ್ಮ ಫೋನಿನಲ್ಲಿಯೇ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದು ಮುಂದಿನಂತಿದೆ.