ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 'ಮಹತ್ವಾಕಾಂಕ್ಷಿ ಸರ್ಕಾರ ಸಮಗ್ರ ಸುಧಾರಣೆ'ಗಳನ್ನುತೆಗೆದುಕೊಳ್ಳುತ್ತಿರುವುದರಿಂದ ಇತರ ಉದಯೋನ್ಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತವು 'ಅಗಾಧ ಬೆಳವಣಿಗೆಯ ಸಾಮರ್ಥ್ಯವನ್ನು' ಹೊಂದಿದೆ ಎಂದು ವಿಶ್ವ ಬ್ಯಾಂಕ್ ಮಂಗಳವಾರ ಹೇಳಿದೆ. ಮಾತ್ರವಲ್ಲ 2018ರಲ್ಲಿ ದೇಶವು ಶೇಕಡಾ 7.3 ಬೆಳವಣಿಗೆ ದರವನ್ನು ದಾಖಲಿಸಲಿದೆ ಎಂದು ಅದು ಅಂದಾಜಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಬೆಳವಣಿಗೆ ದರ 7.5ನ್ನು ತಲುಪಲಿದೆ ಎಂದೂ ವಿಶ್ವಬ್ಯಾಂಕ್ ತಿಳಿಸಿದೆ. ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯ ಹಿನ್ನಡೆಯ ಮಧ್ಯೆಯೂ ಭಾರತ 2017-18ರಲ್ಲಿ ಶೇಕಡಾ 6.7 ಬೆಳವಣಿಗೆ ದರ ದಾಖಲಿಸಲಿದೆ ಎಂದು ವಿಶ್ವಬ್ಯಾಂಕ್ ತನ್ನ '2018-ಗ್ಲೋಬಲ್ ಎಕನಾಮಿಕ್ ಪ್ರಾಸ್ಪೆಕ್ಟ್'ನಲ್ಲಿ ತಿಳಿಸಿದೆ. "ಎಲ್ಲಾ ರಂಗಗಳಿಗೆ ಹೋಲಿಸಿದರೂ ಭಾರತ ಉಳಿದೆಲ್ಲಾ ಬೆಳೆವಣಿಗೆ ಹೊಂದುತ್ತಿರುವ ಆರ್ಥಿಕತೆಗಳಿಗಿಂತ ಮುಂದಿನ ಒಂದು ದಶಕದಲ್ಲಿ ಹೆಚ್ಚಿನ ಬೆಳವಣಿಗೆ ದರ ದಾಖಲಿಸಲಿದೆ," ಎಂದು ವಿಶ್ವ ಬ್ಯಾಂಕ್ ಅಧಿಕಾರಿ ಅಹನ್ ಕೋಸೆ ಹೇಳಿದ್ದಾರೆ.
World bank praised Modi government for its economic growth . It says India will grow more than China in coming days