ದರ್ಶನ್ 51ನೇ ಸಿನಿಮಾಗೆ ರಚಿತಾ ರಾಮ್ ನಾಯಕಿ | Filmibeat Kannada

Filmibeat Kannada 2018-01-10

Views 1.2K

ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಈಗ ದರ್ಶನ್ ಅಭಿನಯದ 51 ನೇ ಸಿನಿಮಾಗೆ ನಾಯಕಿ ಯಾರು ಅನ್ನುವುದು ದೊಡ್ಡ ಸುದ್ದಿ ಆಗುತ್ತಿದೆ. ಕುರುಕ್ಷೇತ್ರ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗುತ್ತಿದ್ದಂತೆ ಡಿ ಬಾಸ್ ಮುಂದಿನ ಚಿತ್ರದ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ.ಈ ಹಿಂದೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಯಲ್ಲಿ ಡಿಂಪಲ್ ಕ್ವೀನ್ ಮತ್ತೆ ಅಭಿನಯಿಸುತ್ತಾರೆ ಎನ್ನುವ ಸುದ್ದಿ ಆಗಿತ್ತು. ಅದಾದ ನಂತರ ಚಿತ್ರಕ್ಕೆ ರಶ್ಮಿಕಾ ನಾಯಕಿ ಅಂತೆ ಅಎಂದು ಗಾಸಿಪ್ ಕೂಡ ಹರಡಿತ್ತು.ದರ್ಶನ್ ಚಿತ್ರಕ್ಕೆ ಕನ್ನಡದ ನಟಿಯನ್ನೇ ಆಯ್ಕೆ ಮಾಡುವ ಸಲುವಾಗಿ ನಿರ್ಮಾಪಕರು ಕನ್ನಡದ ನಾಯಕಿಯರನ್ನೇ ಹುಡುಕುತ್ತಿದ್ದಾರೆ ಎನ್ನುವ ಸುದ್ದಿಗಳು ಕೇಳಿಬಂದಿದ್ದು ಸುಳ್ಳಲ್ಲ. ಚಿತ್ರಕ್ಕೆ ಕೃತಿ ಕರಬಂಧ ಅವರ ಡೇಟ್ಸ್ ಕೇಳಲಾಗಿತ್ತಂತೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಎಲ್ಲಿಯೂ ಸುದ್ದಿ ಬಿಟ್ಟುಕೊಟ್ಟಿಲ್ಲ. ಅವರನ್ನ ಬಿಟ್ಟು,ಇವರನ್ನ ಬಿಟ್ಟು ಮತ್ಯಾರು ಅನ್ನುವ ಪ್ರಶ್ನೆ ಮೂಡುವಷ್ಟರಲ್ಲಿ ದಚ್ಚುಗೆ ರಚ್ಚುನೇ ನಾಯಕಿ ಅನ್ನೋದು ಕನ್ಫರ್ಮ್ ಆಗಿದ್ಯಂತೆ.
Kannada actress Rachita Ram is the heroine of Challenging star Darshan's 51st movie. Rashmika Mandanna will be acting as the second heroine of the film.The Film Muhurat will be held on Sankranti festival

Share This Video


Download

  
Report form
RELATED VIDEOS