'ವಿಲನ್' ಚಿತ್ರಕ್ಕು ಮುಂಚೆ ಮತ್ತೊಂದು ಚಿತ್ರದಲ್ಲಿ ಸುದೀಪ್ 'ವಿಲನ್' | Filmibeat Kannada

Filmibeat Kannada 2018-01-12

Views 145

ಸ್ಯಾಂಡಲ್ ವುಡ್ ನಲ್ಲಿ ನಾಯಕನಟನಾಗಿದ್ದ ಸುದೀಪ್, ತೆಲುಗಿನ 'ಈಗ' ಚಿತ್ರದಲ್ಲಿ ಮೊದಲ ಬಾರಿಗೆ ವಿಲನ್ ಆಗಿ ಮಿಂಚಿದ್ದರು. ಈ ಚಿತ್ರದ ನಂತರ ಸುದೀಪ್ ಹೆಸರು ಬೇರೆ ಚಿತ್ರರಂಗಗಳಲ್ಲಿಯೂ ಸದ್ದು ಮಾಡಿತು. ಕಿಚ್ಚನನ್ನ ಬೇರೆ ಬೇರೆ ಪಾತ್ರಗಳಲ್ಲಿ ನೋಡುವ ಮನಸ್ಸು ಮಾಡಿದರು ನಿರ್ದೇಶಕರು. 'ಈಗ' ನಂತರ ತಮಿಳಿನ 'ಪುಲಿ' ಚಿತ್ರದಲ್ಲೂ ಸುದೀಪ್ ಖಳನಾಯಕನಾಗಿ ಅಬ್ಬರಿಸಿದ್ದರು. ಆದ್ರೆ, ಕನ್ನಡದಲ್ಲಿ ಕಿಚ್ಚನನ್ನ ವಿಲನ್ ಶೇಡ್ ನಲ್ಲಿ ನೋಡೋ ಭಾಗ್ಯ ಸಿಕ್ಕಿರಲಿಲ್ಲ. 'ವಾಲಿ' ಚಿತ್ರದಲ್ಲಿ ದ್ವಿಪಾತ್ರ ನಿರ್ವಹಿಸಿದ್ದ ಸುದೀಪ್ ನೆಗಿಟೀವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ, ಜೋಗಿ ಪ್ರೇಮ್ 'ದಿ ವಿಲನ್' ಎಂಬ ಸಿನಿಮಾ ಶುರು ಮಾಡುವ ಮೂಲಕ, ಸುದೀಪ್ ಪಾತ್ರದ ಬಗ್ಗೆ ಕುತೂಹಲ ಹುಟ್ಟಿಸಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ಒಟ್ಟಿಗೆ ಅಭಿನಯಿಸುತ್ತಿದ್ದು, ನೆಗಿಟೀವ್ ಶೇಡ್ ಇರಬಹುದು ಎಂಬ ಲೆಕ್ಕಾಚಾರ ಅಭಿಮಾನಿಗಳಿಗೆ ಬಿಟ್ಟಿದ್ದರು.

Sudeep is no doubt a wonderful actor . But all of his iconic roles slightly have negative shade to them . Now fans are eagerly waiting for " The Villain " and his role in it

Share This Video


Download

  
Report form
RELATED VIDEOS