ಜೆ ಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ಸುದೀಪ್ ದಂಪತಿಗೆ ಥ್ಯಾಂಕ್ಸ್ ಹೇಳಿದ್ಯಾಕೆ? | Filmibeat Kannada

Filmibeat Kannada 2018-01-12

Views 1.5K

Bigg Boss Kannada Season 5 : Bigg Boss show is almost getting over. At this time,Bigg Boss had given a task Simple Agi Ond Thanks Heli for the contestants. In this task, Contestants had to express their Gratitude towards the person who helped them in their Bad Times. So JK aka Karthik Jayaram expressed his Gratitude towards Sudeep & Priya Sudeep who helped him in his bad times. To know Watch Video.


'ಬಿಗ್ ಬಾಸ್ ಕನ್ನಡ 5' ಕಾರ್ಯಕ್ರಮದಲ್ಲಿ 'ಬಿಗ್' ಮನೆ ಸೇರಿರುವ ಹ್ಯಾಂಡ್ ಸಮ್ ಸ್ಪರ್ಧಿ ಜೆ.ಕೆ ಅಲಿಯಾಸ್ ಕಾರ್ತಿಕ್ ಜಯರಾಂ. 'ಅಶ್ವಿನಿ ನಕ್ಷತ್ರ' ಖ್ಯಾತಿಯ ಜೆ.ಕೆ, ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಮಿಂಚಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ ಬಾಲಿವುಡ್ ನ ದೊಡ್ಡ ಧಾರಾವಾಹಿಯಲ್ಲಿ 'ರಾವಣ'ನ ಪಾತ್ರ ನಿರ್ವಹಿಸುವ ಮೂಲಕ ದೊಡ್ಡ ಯಶಸ್ಸು ಗಳಿಸಿಕೊಂಡಿರುವ ಖ್ಯಾತಿ ಅವರದ್ದು. ಆದ್ರೆ, 'ಜೆ.ಕೆ'ಯ ಈ ಯಶಸ್ಸಿನ ಜರ್ನಿ ಹೂವಿನ ಹಾಸಿಗೆಯಾಗಿರಲಿಲ್ಲ. ಮುಳ್ಳಿನ ಹಾದಿಯಾಗಿತ್ತು. ಸಿನಿಮಾ ಮಾಡ್ಬೇಕು ಎಂಬ ಆಸೆಯಿಂದ ಬಂದ 'ಜೆ.ಕೆ'ಗೆ ಆರಂಭದಲ್ಲಿ ಅವಕಾಶ ಸಿಗಲಿಲ್ಲ. ಕಾದು ಕಾದು ಬೇಸರಗೊಂಡಿದ್ದ ಕಾರ್ತಿಕ್ ಜಯರಾಂ, ಸಿಕ್ಕ ಸಣ್ಣಪುಟ್ಟ ಪಾತ್ರಗಳನ್ನ ಮಾಡಿಕೊಂಡು ನೆಲೆ ಕಾಣಲು ಹರಸಾಹಸ ಪಡುತ್ತಿದ್ದರು.ಆಗ ತಮ್ಮ ಸಹಾಯಕ್ಕೆ ಬಂದಿದ್ದು ಸುದೀಪ್ ಹಾಗು ಪತ್ನಿ ಪ್ರಿಯ ಸುದೀಪ್. ಸುದೀಪ್ ಜೆ ಕೆ ನ ಚಿತ್ರರಂಗಕ್ಕೆ ಪರಿಚಯ ಮಾಡಿದವರು. ಸುದೀಪ್ ಜೆ ಕೆಗೆ ಗಾಡ್ ಫಾದರ್ ಎಂದೇ ಹೇಳಬೇಕು.ಇನ್ನು ಇನ್ನೇನು ಬಿಗ್ ಬಾಸ್ ಮುಗಿಯುವ ಹಂತಕ್ಕೆ ತಲುಪಿದಾಗ ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನ ಕೊಟ್ಟಿದ್ರು. ಸಿಂಪಲ್ ಆಗಿ ಒಂದು ಥ್ಯಾಂಕ್ಸ್ ಹೇಳಿ ಎಂಬ ಟಾಸ್ಕ್ ನಲ್ಲಿ ಸ್ಪರ್ಧಿಗಳು ತಮಗೆ ಸಹಾಯ ಮಾಡಿದ ವ್ಯಕ್ತಿಗಳು ಕುಟುಂಬದವರನ್ನ ಹೊರತುಪಡಿಸಿ ಹೊರಗಿನವರಿಗೆ ತಾವು ಕಷ್ಟದ ಸಮಯದಲ್ಲಿ ಸಹಾಯ ಮಾಡಿದವರಿಗೆ ಕೃತಜ್ಞತೆ ಅರ್ಪಿಸುವ ಒಂದು ಟಾಸ್ಕ್ ಇದಾಗಿತ್ತು. ಇದರಲ್ಲಿ ಜೆ ಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ತಾವು ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ಸುದೀಪ್ ದಂಪತಿಗೆ ಕೃತಜ್ಞತೆಯನ್ನ ಸಲ್ಲಿಸುತ್ತಾರೆ. ಈ ವಿಡಿಯೋ ನೋಡಿ.

Share This Video


Download

  
Report form
RELATED VIDEOS