ಆಲೂರಿನ ಅಜ್ಜಿ ಮನೆಗೆ ಬಂದಿದ್ದ ಬಾಲಕ ಆನೆ ದಾಳಿಗೆ ಬಲಿ | Oneindia Kannada

Oneindia Kannada 2018-01-15

Views 212

ಸಂಕ್ರಾಂತಿ ಹಬ್ಬಕ್ಕೆ ಅಜ್ಜಿ ಮನೆಗೆ ಬಂದಿದ್ದ ಬಾಲಕ ಆನೆ ದಾಳಿಗೆ ಬಲಿಯಾದ ಘಟನೆ ಹಾಸನದಲ್ಲಿ ನಡೆದಿದೆ. ಮೃತಪಟ್ಟ ಬಾಲಕ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಭರತ್ (14) ಆನೆ ದಾಳಿಯಿಂದ ಮೃತಪಟ್ಟ ಬಾಲಕ. ಹಾಸನ ಜಿಲ್ಲೆಯ ಆಲೂರು ಬಳಿಯ ಕೊಡಗತ್ತವಳ್ಳಿಯಲ್ಲಿ ಅಜ್ಜಿ ಮನೆಗೆ ಶನಿವಾರ ಬಂದಿದ್ದ ಭರತ್, ಭಾನುವಾರ ಆನೆ ದಾಳಿಯಿಂದ ಮೃತಪಟ್ಟಿದ್ದಾನೆ.

ಭಾನುವಾರ ಬೆಳಗ್ಗೆ ಭರತ್ ಮನೆ ಮುಂದೆ ಕಟ್ಟಿ ಹಾಕಿದ್ದ ಕರುವಿನೊಂದಿಗೆ ಆಟವಾಡುತ್ತಿದ್ದ. ಏಕಾಏಕಿ ಆಗಮಿಸಿದ ಒಂಟಿ ಸಲಗ ಸೊಂಡಿಲಿನಲ್ಲಿ ಆತನನ್ನು ಎಳೆದು, ತುಳಿದು ಕೊಂದು ಹಾಕಿದೆ.ಆನೆಯನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಭರತ್‌ನನ್ನು ರಕ್ಷಣೆ ಮಾಡಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಹಾಸನದಲ್ಲಿ ತಾಯಿ, ತಂಗಿಯೊಂದಿಗೆ ವಾಸವಿದ್ದ ಭರತ್ ಸಂಕ್ರಾಂತಿ ಹಬ್ಬಕ್ಕೆಂದು ಅಜ್ಜಿ ಮನೆಗೆ ಆಗಮಿಸಿದ್ದ
.
ಹಾಸನದಲ್ಲಿ ತಾಯಿ, ತಂಗಿಯ ಜೊತೆ ಭರತ್ ವಾಸವಾಗಿದ್ದ. ಸಂಕ್ರಾಂತಿ ಹಬ್ಬಕ್ಕಾಗಿ ಶನಿವಾರ ಆಲೂರು ಬಳಿಯ ಅಜ್ಜಿಯ ಮನೆಗೆ ಬಂದಿದ್ದ. ಆಗ ಈ ದುರ್ಘಟನೆ ನೆಡೆದಿದೆ.
A boy who went to his granny's home on a holiday was killed by a wild elephant.

Share This Video


Download

  
Report form
RELATED VIDEOS