ಸುಗ್ಗಿಹಬ್ಬ ಮಕರ ಸಂಕ್ರಾಂತಿಗೆ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟ್ವಿಟ್ಟಿಗರು ಸಿಹಿ ಮತ್ತು ಕಹಿ ಎರಡನ್ನೂ ತಿನ್ನಿಸಿದ್ದಾರೆ.
ಭಾನುವಾರ ಜನವರಿ ಹದಿನಾಲ್ಕರಂದು ಸಿಎಂ ಶುಭಾಶಯದ ಟ್ವೀಟ್ ಅನ್ನು @CMofKarnataka ಅಕೌಂಟಿನಿಂದ ಮಾಡಿದ್ದರು. ಅದಕ್ಕೆ ಸುಮಾರು ಆರುನೂರು ಲೈಕ್ಸ್ ಬಂದಿತ್ತು. ಜೊತೆಗೆ, ಅದು 123 ಬಾರಿ ರಿಟ್ವೀಟ್ ಆಗಿತ್ತು, 156 ಜನ ಅದಕ್ಕೆ ರಿಪ್ಲೈ ಮಾಡಿದ್ದರು.
ಮತ್ತೆ ಬನ್ನಿ ಸಾರ್. ಗೆಲುವು ನಿಮ್ಮದಾಗಲಿ. ಮಕರ ಸಂಕ್ರಾಂತಿ ಹಬ್ಬದಂದು ನಾಡಿನ ಜತೆಗೆ ಶುಭ ಕೋರಿದಕ್ಕೆ ಧನ್ಯವಾದಗಳು. ಮುಂದಿನ ಸಂಕ್ರಾತಿಗೆ ನೀವೂ ಅಧಿಕಾರದಲ್ಲಿ ಇಲ್ಲದಿದ್ದಾರೆ ಸಾಕು.. ಹೀಗೆ ಮುಖ್ಯಮಂತ್ರಿಗಳಿಗೆ, ಟ್ವಿಟ್ಟಿಗರು ಸಿಹಿಕಹಿ ಎರಡನ್ನೂ ತಿನ್ನಿಸಿದ್ದಾರೆ.
ಬಿಜೆಪಿ, RSS, ಸಂಘಪರಿವಾರದವರು ಭಯೋತ್ಪಾದಕರು ಎನ್ನುವ ಮುಖ್ಯಮಂತ್ರಿಗಳ ಹೇಳಿಕೆಯ ನಂತರ, ಪರವಿರೋಧ ನಿಲುವು/ಹೇಳಿಕೆಗಳು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ.
Karnataka Chief Minister Siddaramaiah's Makara Sankranti wishes through Twitter and twitterite reply for the CM tweet.