ರಾಜ್ಯದಲ್ಲಿ ತುಘಲಕ್ ಸರ್ಕಾರ ಅಧಿಕಾರದಲ್ಲಿದೆ, ಈ ಬಾರಿ ಚುನಾವಣೆಯಲ್ಲಿ ಅದನ್ನು ಕಿತ್ತೊಗೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು.
ಹೊಸಕೋಟೆ ತಲುಪಿರುವ ಪರಿವರ್ತನಾ ಯಾತ್ರೆಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆದಷ್ಟು ಭ್ರಷ್ಟಾಚಾರ ಇನ್ನಾವ ಸರ್ಕಾರದ ಅವಧಿಯಲ್ಲಿಯೂ ಆಗಿಲ್ಲ, ದೇಶದಲ್ಲೆ ನಂ.1 ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರು.
ಹೊಸಕೋಟೆಯ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜು ಸೇರಿದಂತೆ ಹಲವು ಜನ ಕಾಂಗ್ರೆಸ್ ಶಾಸಕರು ಸಂಪೂರ್ಣ ಭ್ರಷ್ಟರಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಭ್ರಷ್ಟಾರದ ತನಿಖೆ ಮಾಡಿಸಿ ಭ್ರಷ್ಟ ಶಾಸಕರಿಗೆ ತಕ್ಕ ಪಾಠ ಕಲಿಸದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ಸವಾಲ್ ಹಾಕಿದರು.
ಪರಿವರ್ತನಾ ಯಾತ್ರೆ ಮಾಡುತ್ತಿರುವುದು ಎಲ್ಲಾ ಕ್ಷೇತ್ರದ ಸಮಸ್ಯೆ ಅರಿತು, ಅಧಿಕಾರಕ್ಕೆ ಬಂದ ಮೇಲೆ ಅವುಗಳನ್ನೆಲ್ಲಾ ಬಗೆಹರಿಸುವ ಉದ್ದೇಶದಿಂದ ಎಂದ ಅವರು, ಈ ಬಾರಿ ಬಿಜೆಪಿಯನ್ನು ಗೆಲ್ಲಿಸಿ ಇನ್ನು 5 ವರ್ಷ ನೆಮ್ಮದಿಯಿಂದ ಇರಿ ಎಂದು ಅವರು ಮನವಿ ಮಾಡಿದರು.
Yeddyurappa said 'law and order is demolished in Karnataka, Siddaramaiah is no.1 corrupt CM in India. He also said congress MLA's are become corrupt BJP will reopen their cases if it get to power.