'ಬಿಗ್ ಬಾಸ್' ಮನೆಯೊಳಗೆ ಮತ್ತೆ ಜಯಶ್ರೀನಿವಾಸನ್ ಧಿಡೀರ್ ಪ್ರತ್ಯಕ್ಷ.! | Filmibeat Kannada

Filmibeat Kannada 2018-01-19

Views 1.3K

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹನ್ನೊಂದನೇ ವಾರ ಇದ್ದಕ್ಕಿದ್ದಂತೆ ಕನ್ಫೆಶನ್ ರೂಮ್ ನಿಂದ ನಾಪತ್ತೆ ಆದ ಜಯಶ್ರೀನಿವಾಸನ್ ನಂತರ ಪ್ರತ್ಯಕ್ಷವಾಗಿದ್ದು ಸೀಕ್ರೆಟ್ ರೂಮ್ ನಲ್ಲಿ. ಅದೇ ವಾರ ಸೀಕ್ರೆಟ್ ರೂಮ್ ನಿಂದಲೇ ಜಯಶ್ರೀನಿವಾಸನ್ ಎಲಿಮಿನೇಟ್ ಆಗ್ಬಿಟ್ರು.

ಇಂತಿಪ್ಪ ಜಯಶ್ರೀನಿವಾಸನ್ ಇದೀಗ 'ಬಿಗ್ ಬಾಸ್' ಮನೆಯೊಳಗೆ ರೀ ಎಂಟ್ರಿಕೊಟ್ಟಿದ್ದಾರೆ. ಯಾವ ಕನ್ಫೆಶನ್ ರೂಮ್ ನಿಂದ ಜಯಶ್ರೀನಿವಾಸನ್ ಹೊರ ನಡೆದಿದ್ರೋ, ಅದೇ ಕನ್ಫೆಶನ್ ರೂಮ್ ನಿಂದ ಜಯಶ್ರೀನಿವಾಸನ್ 'ಬಿಗ್ ಬಾಸ್' ಮನೆಯೊಳಗೆ ಅತಿಥಿಯಾಗಿ ಬಂದಿದ್ದಾರೆ.

ಹಾಗ್ನೋಡಿದ್ರೆ, ಜಯಶ್ರೀನಿವಾಸನ್ ಎಲಿಮಿನೇಟ್ ಆದ ವಿಚಾರ ಮಿಕ್ಕ ಸ್ಪರ್ಧಿಗಳಿಗೆ ಗೊತ್ತಾಗಿದ್ದೇ ತಡವಾಗಿ. ಹೀಗಾಗಿ ಜಯಶ್ರೀನಿವಾಸನ್ ಔಟ್ ಆದಾಗ, ಅವರನ್ನ ಮಿಕ್ಕ ಸ್ಪರ್ಧಿಗಳು ಮಾತನಾಡಿಸಿರಲಿಲ್ಲ.ಈಗ ಜಯಶ್ರೀನಿವಾಸನ್ ಒಂದು ಚಟುವಟಿಕೆಗಾಗಿ 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದಾರೆ. ಈಗಾಗಲೇ, ತೇಜಸ್ವಿನಿ, ಆಶಿತಾ, ದಯಾಳ್, ಸಿಹಿ ಕಹಿ ಚಂದ್ರು, ಜಗನ್ ಸೇರಿದಂತೆ ಎಲಿಮಿನೇಟ್ ಆದ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ಚಟುವಟಿಕೆಯ ಸಾರಥ್ಯ ವಹಿಸಿಕೊಳ್ಳುತ್ತಿದ್ದಾರೆ.
After the sudden exit of jayashrinivasan from the big Boss house he has suddenly re appeared in the house . But this time not as a contestant but as a guest . Watch today's episode to know more

Share This Video


Download

  
Report form
RELATED VIDEOS