ಖಾಸಗಿ ಸುದ್ದಿವಾಹಿನಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ (ಕಾಸ್ಟಿಂಗ್ ಕೌಚ್) ಸಿನಿಮಾರಂಗಕ್ಕೆ ಬರುವಾಗ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ನಟಿ ಶೃತಿ ಹರಿಹರನ್ ನಿನ್ನೆ(ಜ.19) ಮಾತನಾಡಿದ್ದರು.
ಬೆಳಗಾಗುತ್ತಲೇ ದೊಡ್ಡ ಮಟ್ಟದಲ್ಲಿ ಈ ಸುದ್ದಿ ಹರಿದಾಡಿತ್ತು. ಸುಮಾರು ಐದು ತಿಂಗಳ ಹಿಂದೆಯೂ ಶೃತಿ ಈ ಬಗ್ಗೆ ಮಾತನಾಡಿದ್ದರು. ನಿನ್ನೆ ನಡೆದ "ಸೆಕ್ಸಿಸಮ್ ಇನ್ ಇಂಡಿಯಾ" ಸಿನಿಮಾ ವಿಷಯದಲ್ಲಿ ಮಾತನಾಡುತ್ತಾ ಚಿತ್ರರಂಗದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಶೃತಿ ನೇರ ನುಡಿಯಲ್ಲಿ ಮಾತನಾಡಿದ್ದರು.
ಇಷ್ಟೆಲ್ಲಾ ಮಾತನಾಡಿದ ನಂತರ ಶೃತಿ ಯಾವುದೇ ಮಾಧ್ಯಮದವರ ಕಣ್ಣಿಗೆ ಬಿದ್ದಿಲ್ಲ. ಹಾಗಾದ್ರೆ ಶೃತಿ ಎಲ್ಲಿದ್ದಾರೆ? ಈ ಬಗ್ಗೆ ಶೃತಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದೇನು? ಮಾಧ್ಯಮದವರ ಬಳಿ ಶೃತಿ ಮಾಡಿರುವ ಮನವಿ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.ಸಿನಿಮಾರಂಗದಲ್ಲಿ ಲೈಗಿಂಕ ಕಿರುಕುಳ ನಿಲ್ಲಬೇಕು ಎಂದು ಶೃತಿ ಹರಿಹರನ್ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಬಗ್ಗೆ ಕೇವಲ ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದಾರೆ.
Shruthi Hariharan recently in a private channel event spoke about the casting couch happening in south India . But was not seen after the statement was made by her . But this is what she is doing after that