ನಮ್ಮ ಪಾಲಿಗೆ ದಿನ ಶುರುವಾಗೋದು ಮೊಬೈಲ್ ನಲ್ಲಿ ಬಂದ ವಾಟ್ಸ್ ಆಪ್ ಮೆಸೇಜುಗಳನ್ನು ನೋಡುವುದರ ಮೂಲಕ ಅನ್ನೋರು ಇರುವ ಹಾಗೆಯೇ ದಿನ ಭವಿಷ್ಯ ತಿಳಿದುಕೊಂಡ ಮೇಲೆ ಮುಂದಿನ ಕೆಲಸ ಅಂತ ಹೇಳುವವರೂ ಇದ್ದಾರೆ. ಯಾವತ್ತೂ ಗಾಡಿ ಓಡಿಸ್ತಾ ಬಿದ್ದಿರಲಿಲ್ಲ, ಇವತ್ತು ಬಿದ್ದುಬಿಟ್ಟೆ. ಅದೇನು ಗ್ರಹಚಾರವೋ ಎಂದು ಹಳಿಯುವುದು ಬೇಡ. ಅದ್ಯಾವ ಸಮಯದಲ್ಲಿ ಮನೆ ಬಿಟ್ಟೆನೋ ಎಲ್ಲ ಕೆಲಸ ಸಲೀಸಾಗಿ ಆಯಿತು ಎಂದು ಪ್ರತಿ ದಿನವೂ ನೀವು ಖುಷಿ ಪಡುವಂತಾಗಬೇಕು. ಆದ್ದರಿಂದಲೇ ಒನ್ಇಂಡಿಯಾ ಕನ್ನಡದಲ್ಲಿ ಬರುವ ದಿನ ಭವಿಷ್ಯದ ಮೇಲೆ ಒಮ್ಮೆ ಕಣ್ಣಾಡಿಸಿ. ಹ್ಞಾಂ, ಜತೆಗೆ ರಾಹುಕಾಲ, ಗುಳಿಕ ಕಾಲ, ಯಮಕಂಟಕ ಕಾಲ ಯಾವುದು ಅಂತಲೂ ತಿಳಿದುಕೊಳ್ಳಿ.ಮನೆ ಬಿಡುವಾಗ ಒಂದೈದು ನಿಮಿಷ ಮುಂಚಿತವಾಗಿ ಹೊರಡಬಹುದು ಅಥವಾ ಅಶುಭ ಕಾಲ ಮುಗಿದ ಒಂದೈದು ನಿಮಿಷದ ನಂತರ ಹೊರಡಲು ಯೋಚಿಸಬಹುದಲ್ಲವೆ? ಇವೆಲ್ಲ ಮೂಢನಂಬಿಕೆ ಕಣ್ರೀ, ಅದೆಲ್ಲ ಹೇಳೋಕೆ ಬರಬೇಡಿ ಅನ್ನುವವರಿಗೆ ನಮ್ಮ ಯಾವುದೇ ಒತ್ತಾಯ ಇಲ್ಲ. ಆದರೆ ಇವನ್ನೆಲ್ಲ ಅನುಸರಿಸಿದರೆ ಒಳಿತಾಗುತ್ತದೆ ಎಂದು ನಂಬುವವರಿಗಂತೂ ಇದರಿಂದ ಸಹಾಯ ಆಗೇ ಆಗುತ್ತದೆ ಎಂಬ ಬಲವಾದ ನಂಬಿಕೆ ನಮ್ಮದು