ಕೈ ಕೈ ಹಿಡಿದು ಒಟ್ಟಿಗೆ ಹೆಜ್ಜೆ ಇಟ್ಟ ಬಾಲಿವುಡ್ ಪ್ರಣಯ ಪಕ್ಷಿಗಳು | Filmibeat Kannada

Filmibeat Kannada 2018-01-24

Views 1.1K

The team of Padmaavat was spotted at the film's screening on Tuesday. At the event, love birds, Deepika Padukone and Ranveer Singh arrived holding hands and smiling for the cameras. The couple matched each other in white and both looked stunning.


ಬಾಲಿವುಡ್ ನ ಪ್ರಣಯ ಪಕ್ಷಿಗಳಾದ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಇಬ್ಬರು ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಆಮೇಲೆ ಅದು ಬರಿ ವದಂತಿ ಮಾತ್ರ ಎಂಬುದು ಖಾತ್ರಿಯಾಯಿತು.

ಇದೀಗ, ದೀಪಿಕಾ ಹಾಗೂ ರಣ್ವೀರ್ ಸಿಂಗ್ ಇಬ್ಬರು ತುಂಬ ದಿನಗಳ ನಂತರ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಇಬ್ಬರು ಬಿಳಿ ಬಣ್ಣದ ಬಟ್ಟೆಗಳನ್ನ ತೊಟ್ಟು, ರಾಜ-ರಾಣಿಯಂತೆ ಕಾಣಿಸಿಕೊಂಡಿದ್ದಾರೆ.

ಒಬ್ಬರ ಕೈ ಮತ್ತೊಬ್ಬರು ಹಿಡಿದುಕೊಂಡು, ನಗು ನಗುತಾ ಒಟ್ಟಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಇದು ನೋಡುಗರನ್ನ ಒಂದು ಕ್ಷಣ ಆಶ್ಚರ್ಯ ಉಂಟು ಮಾಡಿದ್ರು, ಸರ್ಪ್ರೈಸ್ ಕೂಡ ಆಗಿತ್ತು.ಅಷ್ಟಕ್ಕೂ, ಇವರಿಬ್ಬರು ಹೀಗೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಚಿತ್ರದ ವಿಶೇಷ ಪ್ರದರ್ಶನದಲ್ಲಿ. 'ಪದ್ಮಾವತ್' ಸಿನಿಮಾ ಜನವರಿ 25 ರಂದು ತೆರೆಕಾಣುತ್ತಿದ್ದು, ಒಂದು ದಿನ ಮುಂಚೆಯೇ ಸಿನಿಮಾವನ್ನ ಬಾಲಿವುಡ್ ತಾರೆಯರಿಗೆ ತೋರಿಸಲಾಗಿದೆ.

Share This Video


Download

  
Report form
RELATED VIDEOS