Karnataka Bandh (Mahadayi) : ಬೆಂಗಳೂರಿನ ಟೌನ್ ಹಾಲ್ ಬಳಿ ಬಂಧ್ ಬಿಸಿ ಜೋರು | Oneindia Kannada

Oneindia Kannada 2018-01-25

Views 1.4K

ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ಮಹಾದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯಸ್ತಿಕೆ ವಹಿಸಬೇಕೆಂದು ಕೋರಿ ವಿವಿಧ ಸಂಘಟನೆಗಳು ಕರೆದಿರುವ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಇಂದು(ಜ.25) ನಡೆಯುತ್ತಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಶಾಲೆಗಳು, ಕಂಪನಿಗಳು ಮುಂಚಿತವಾಗಿಯೇ ರಜೆ ಘೋಷಿಸಿದ್ದವು. ಹಲವು ಶಾಲೆಗಳು ಬೆಳಿಗ್ಗೆ ಪರಿಸ್ಥಿತಿ ನೋಡಿ ನಂತರ ತಿಳಿಸುವುದಾಗಿ ಹೇಳಿವೆ. ಈಗಾಗಲೇ ರಾಜ್ಯದಾದ್ಯಂತ ಹಲವೆಡೆ ಪ್ರತಿಭಟನೆ ನಡೆಯುತ್ತಿದ್ದು, ಬೆಂಗಳೂರಿನ ಮೆಜೆಸ್ಟಿಕ್, ರೈಲ್ವೇ ನಿಲ್ದಾಣಗಳಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮಾಲ್ ಗಳಲ್ಲಿ ಸಂಜೆ ತನಕ ಚಿತ್ರಪ್ರದರ್ಶನವಿಲ್ಲ

ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುತ್ತಿದ್ದ 400 ಬಸ್ಸುಗಳ ಸಂಚಾರ ಸ್ಥಗಿತ. ಮುನ್ನೆಚ್ಚರಿಕೆಗಾಗಿ ಈ ಕ್ರಮ

ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕರವೇ ಮುಖಂಡ ನಾರಾಯಣ ಗೌಡ ನೇತೃತ್ವದಲ್ಲಿ ಪ್ರತಿಭಟನೆ. ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಪ್ರತಿಭಟನೆಯಲ್ಲಿ ನಿರತರಾಗಿರುವವರಿಗೆ, ಅವರಿವರ ವಿರುದ್ಧ ಧಿಕ್ಕಾರ ಕೂಗುತ್ತಿರುವವರಿಗೆ, ರಸ್ತೆರಸ್ತೆಗಳಲ್ಲಿ ಟೈರುಗಳಿಗೆ ಬೆಂಕಿ ಹಚ್ಚುವವರಿಗೆ, ರೈಲಿನ ಮುಂದೆ ಮಲಗಿ ಸಂಚಾರ ನಿಲ್ಲಿಸುವವರಿಗೆ, ಬಸ್ಸಿಗೆ ಕಲ್ಲೇಟು ಹೊಡೆಯುವವರಿಗೆ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವವರಿಗೆ, ಹೆಲ್ಮೆಟ್ ಇಲ್ಲದೆ ಬೈಕ್ ಮೇಲೆ ಜಾಥಾ ಮಾಡುವ ಎಷ್ಟು ಜನರಿಗೆ ತಾವು ಯಾವ ಕಾರಣಕ್ಕಾಗಿ ಬಂದ್ ಮಾಡುತ್ತಿದ್ದೇವೆಂಬುದು ಗೊತ್ತಾ?

Share This Video


Download

  
Report form