ಕರ್ನಾಟಕ ಬಂದ್ : ಮಹದಾಯಿ ಪ್ರತಿಭಟನೆ ಬಗ್ಗೆ ಪ್ರಕಾಶ್ ರಾಜ್ ಹೇಳಿದ್ದೇನು ಗೊತ್ತಾ? | Oneindia Kannada

Oneindia Kannada 2018-01-25

Views 2.6K

Karnataka bandh on Jan 25th is taking place all over the state. Protesters demanding Prime minister Narendra Modi ti interfere in Mahadayi issue. Now actor Prakash Raj ( Rai ) speaks about Mahadayi protest. Watch video to know what Prakash Raj ( Rai ) says about Bandh.

ಮತ್ತೆ ಕರ್ನಾಟಕ ಬಂದ್! ಭಾಷೆ, ನೀರು, ನೆಲ... ಈ ಮೂರಕ್ಕಾಗಿ ಇಲ್ಲಿ ಆಗಾಗ ಬಂದ್ ನಡೆಯುತ್ತಲೇ ಇರುತ್ತದೆ.

ಈ ಬಂದ್ ಗಳಿಂದ ಆಗುವ ಲಾಭವೇನೋ, ಕೇಂದ್ರ ಸರ್ಕಾರಕ್ಕೆ ಸಂದೇಶ ತಲುಪಿಸಲು ನಿಜಕ್ಕೂ ಇದೊಂದು ಪರಿಣಾಮಕಾರಿ ದಾರಿಯಾ ಎಂಬುದು ಅರ್ಥವಾಗದ ವಿಷಯವಾದರೂ, ಕುಡಿಯುವ ನೀರಿನ ವಿಷಯಕ್ಕೆ ಬಂದಾಗ ಇಂಥ ಪ್ರತಿಭಟನೆಗಳು ಅನಿವಾರ್ಯ ಎನ್ನಿಸದಿರದು.

ಉತ್ತರ ಕರ್ನಾಟಕದ ಭಾಗದ ಬಾಗಲಕೋಟೆ, ಗದಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಕುಡಿವ ನೀರು ಒದಗಿಸುವ ಮಹದಾಯಿ ಯೋಜನೆಗೆ ಗೋವಾ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯನ್ನು ಪ್ರತಿಭಟನಕಾರರು ಬಯಸುತ್ತಿದ್ದಾರೆ.

ಇದು(ಜ.25) ರಾಜ್ಯದಾದ್ಯಂತ ಆಚರಿಸಲಾಗುತ್ತಿರುವ ಬಂದ್ ಗೆ ವಿವಿಧ ಕನ್ನಡಪರ ಸಂಘಟನೆಗಳು ಕರೆನೀಡಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಹತ್ತು ಹಲವು ಸಂಘಟನೆಗಳು ಬೆಂಬಲ ನೀಡಿವೆ.

ಇನ್ನು ಈ ಪ್ರತಿಭಟನೆ ಬಗ್ಗೆ ನಟ ಪ್ರಕಾಶ್ ರಾಜ್ ಕೂಡ ಮಾತನಾಡಿದ್ದಾರೆ. ಪ್ರಕ್ಶ್ ರಾಜ್ ಏನ್ ಹೇಳ್ತಾರೆ ಎಂದು ತಿಳಿಯಲು ಈ ವಿಡಿಯೋ ನೋಡಿ

Share This Video


Download

  
Report form
RELATED VIDEOS