ಎಡಕಲ್ಲು ಗುಡ್ಡದ ಮೇಲೆ' ಖ್ಯಾತಿಯ ಚಂದ್ರಶೇಖರ್ ಇನ್ನಿಲ್ಲ | Filmibeat Kannada

Filmibeat Kannada 2018-01-27

Views 6

ಸಂತೋಷ ಹ ಹ..ಸಂಗೀತ ಹ ಹ ...ಎಂದು ಹಾಡು ಕೇಳಿದಾಗ ನೆನಪಾಗುತ್ತಿದ್ದ ನಟ ಚಂದ್ರಶೇಖರ್ ಇನ್ನು ನೆನಪು ಮಾತ್ರ. ಎಡಕಲ್ಲು ಗುಡ್ಡದ ಮೇಲೆ ಸಿನಿಮಾದಲ್ಲಿನ ನಂಜುಂಡ ಪಾತ್ರದ ಮೂಲಕ ಇಡೀ ಕನ್ನಡ ಸಿನಿಮಾರಂಗದ ಪ್ರೇಕ್ಷಕರನ್ನ ತನ್ನತ್ತ ಸೆಳೆದಿದ್ದ ನಟ ಚಂದ್ರಶೇಖರ್ ಇಂದು ಇಹಲೋಕ ತ್ಯಜಿಸಿದ್ದಾರೆ.

ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಕೆನಡಾಗೆ ಪ್ರಯಾಣ ಬೆಳೆಸಿದ್ದ ಚಂದ್ರಶೇಖರ್ ಅವರಿಗೆ ಕಾಲಿನಲ್ಲಿ ಬ್ಲಡ್ ಕ್ಲಾಟ್ ಆಗಿತ್ತು. ನಂತರ ಹೃದಯದಲ್ಲಿ ರಕ್ತದೊತ್ತಡ ಕಾಣಿಸಿಕೊಂಡು ಇಂದು ಮುಂಜಾನೆ ಕೆನಡಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಿನಿಮಾರಂಗದಲ್ಲಿ ಎಡಕಲ್ಲು ಗುಡ್ಡ ಚಂದ್ರಶೇಖರ್ ಹಾಗೂ ಕೆನಡಾ ಚಂದ್ರಶೇಖರ್ ಅಂತಾನೇ ಪ್ರಖ್ಯಾತಿ ಪಡೆದಿದ್ದರು . ಚಂದ್ರು ಅವರ ಪತ್ನಿ ಕೆನಡಾದಲ್ಲಿ ಭರತನಾಟ್ಯ ಶಾಲೆಯನ್ನ ನಡೆಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಚಂದ್ರಶೇಖರ್ ಮತ್ತು ಮಗಳು ತಾನ್ಯ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ವಾಸವಾಗಿದ್ದರು.
Veteran Actor, edakallu guddada mele Chandrashekar passes away in Canada today (January 27th) Chandrasekhar has acted in more than 60 Kannada movies

Share This Video


Download

  
Report form
RELATED VIDEOS