ಎಚ್ ಡಿ ರೇವಣ್ಣ, ಜೆಡಿಎಸ್ ನಾಯಕ ಹಾಗು ಕಾಂಗ್ರೆಸ್ ನಡುವೆ ಯುದ್ಧ | Oneindia Kannada

Oneindia Kannada 2018-01-29

Views 10

ಕನ್ನಡಿಗನೊಬ್ಬನನ್ನು ಈ ದೇಶದ ಪ್ರಜಾಪ್ರಭುತ್ವದ ಅತ್ಯುನ್ನತ ಹುದ್ದೆ ಪ್ರಧಾನಿಯನ್ನಾಗಿಸುವ ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸಿದ ಕ್ಷೇತ್ರ ಹೊಳೆನರಸೀಪುರ. ಎಚ್.ಡಿ.ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣ ಪ್ರತಿನಿಧಿಸುತ್ತಿರುವ ಹಾಸನ ಜಿಲ್ಲೆಯ ಪ್ರಮುಖ ಕ್ಷೇತ್ರವಿದು. ಹಿಂದೆ ಎಚ್.ಡಿ.ದೇವೇಗೌಡರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು.

ಕ್ಷೇತ್ರದಿಂದ 6 ಬಾರಿ ಜನರು ದೇವೇಗೌಡರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ್ದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ. 1957ರ ಚುನಾವಣೆಯಲ್ಲಿ ಎ.ಜಿ.ರಾಮಚಂದ್ರ ರಾವ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದ ವೈ.ವೀರಪ್ಪ ಅವರಿಂದ ಸೋಲು ಕಂಡರು. ನಂತರ ತಮ್ಮ ಅನುಯಾಯಿ ಎಚ್.ಡಿ.ದೇವೇಗೌಡರನ್ನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪ್ರೇರೇಪಿಸಿದರು.

1962ರಲ್ಲಿ ಎಚ್.ಡಿ. ದೇವೇಗೌಡರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು. ಆದರೆ, ಅಂದಿನ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಎಸ್. ನಿಜಲಿಂಗಪ್ಪನವರು ದೇವೇಗೌಡರಿಗೆ ಟಿಕೆಟ್ ನಿರಾಕರಿಸಿ ಎಚ್.ಡಿ.ದೊಡ್ಡೇಗೌಡರಿಗೆ ಟಿಕೆಟ್ ನೀಡಿದರು.
Congress and JDS fight in Holenarasipura assembly constituency, Hassan Karnataka. Former PM H.D.Deve Gowda son H.D.Revanna is sitting MLA of the constituency.

Share This Video


Download

  
Report form
RELATED VIDEOS