ಮೂರುವರೆ ತಿಂಗಳ ಹಿಂದೆ ಊರೂರು ಸುತ್ತಿ ತೈಲ ಮಾರಾಟ ಮಾಡುತ್ತಿದ್ದ ದಿವಾಕರ್, ಸದ್ಯ ಇಡೀ ಕರ್ನಾಟಕಕ್ಕೆ 'ಬಿಗ್ ಬಾಸ್' ಮೂಲಕ ಚಿರಪರಿಚಿತ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಜನಸಾಮಾನ್ಯ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದ ದಿವಾಕರ್ ರನ್ನರ್-ಅಪ್ ಆಗಿ ಹೊರ ಹೊಮ್ಮಿದರು.
106 ದಿನ 'ಬಿಗ್ ಬಾಸ್' ಎಂಬ ಚಿನ್ನದ ಪಂಜರದಲ್ಲಿ ಇದ್ದು ಕೊನೆಗೆ ಖ್ಯಾತಿ, ಜನಪ್ರಿಯತೆ, ಕೈಯಲ್ಲಿ ಒಂದು ಲಕ್ಷ ರೂಪಾಯಿ ಬಹುಮಾನ ಹಣ, ರನ್ನರ್-ಅಪ್ ಟ್ರೋಫಿ ಹಿಡಿದು ತಮ್ಮ ಮನೆ ಕಡೆಗೆ ಹೆಜ್ಜೆ ಹಾಕಿದ ದಿವಾಕರ್ ಗೆ ಒಂದು ಶಾಕಿಂಗ್ ನ್ಯೂಸ್ ಕಾದಿತ್ತು. ಅದು ತಮ್ಮ ಪತ್ನಿ ಮಮತಾ ಕಡೆಯಿಂದ.
ತಮ್ಮ ಪತಿ 'ಬಿಗ್ ಬಾಸ್ ವಿನ್ನರ್' ಆಗಬೇಕು ಎಂಬುದು ಮಮತಾ ಅವರ ಆಸೆ ಆಗಿತ್ತು. ಆದ್ರೆ, ದಿವಾಕರ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
Bigg Boss Kannada 5 Runner Diwakar and his wife Mamatha was expecting second baby. But, When Diwakar returned back home after 106 days of his stay in #BBK5 House, a shocking news was awaiting for him.