Udupi Krishna Mutt seer Vishwa Teertha Prasanna provided treatment for rescued Eagle. Noted eye specialist of Udupi Dr Krishna Prasad of Prasad Netralaya hospital came forward to treat a blind Eagle.
ಎರಡೂ ಕಣ್ಣುಗಳಿಗೆ ಪೊರೆ ಆವರಿಸಿರುವ ಹಿನ್ನೆಲೆಯಲ್ಲಿ ದೃಷ್ಟಿ ಹೀನವಾಗಿರುವ ಗರುಡ ಪಕ್ಷಿಗೆ ಉಡುಪಿ ಪೇಜಾವರ ಮಠದಲ್ಲಿ ಆರೈಕೆ ಮಾಡಲಾಗುತ್ತಿದೆ. ಗರುಡ ಪಕ್ಷಿಯ ಆರೈಕೆ ಜವಾಬ್ದಾರಿಯನ್ನು ಪೇಜಾವರ ಮಠದ ಕಿರಿಯ ಸ್ವಾಮಿಗಳಾದ ವಿಶ್ವಪ್ರಸನ್ನ ತೀರ್ಥರು ವಹಿಸಿಕೊಂಡಿದ್ದಾರೆ . ಎರಡು ದಿನಗಳ ಹಿಂದೆ ಉಡುಪಿಯ ಕೃಷ್ಣ ಮಠ ಆವರಣದಲ್ಲಿ ಗರುಡ ಪಕ್ಷಿ ಗಾಯಗೊಂಡು ಬಿದ್ದಿತ್ತು. ಇದಕ್ಕೀಗ ಚಿಕಿತ್ಸೆ ನೀಡಲಾಗುತ್ತಿದೆ.